ಉತ್ತರಾಖಂಡದಲ್ಲಿ ಬೆಂಗಳೂರಿನ ನಾಲ್ವರು ಚಾರಣಿಗರು ಮೃತ್ಯು
ಬೆಂಗಳೂರು: ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯದಿಂದಾಗಿ, ಬೆಂಗಳೂರಿನ ನಾಲ್ವರು ಚಾರಣಿಗರು ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಇನ್ನೂ ಸುಮಾರು 19 ಮಂದಿ ಚಾರಣಿಗರು ಗರ್ವಾಲ್ ಕಣಿವೆ ಪ್ರಾಂತ್ಯದ ಸಹಸ್ತ್ರ ತಾಲ್-ಮಯಾಲಿ ಭಾಗದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಕಣಿವೆ ಪ್ರಾಂತ್ಯದಲ್ಲಿ ತೀವ್ರ ಸ್ವರೂಪದ ಹವಾಮಾನ ವೈಪರೀತ್ಯ ಕಾಣಿಸಿಕೊಂಡಿರುವುದರಿಂದ, ಕನಿಷ್ಠ ಪಕ್ಷ ನಾಲ್ವರು ಚಾರಣಿಗರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಣಿವೆ ಪ್ರಾಂತ್ಯದಲ್ಲಿ ಸಿಲುಕಿಕೊಂಡಿರುವ ಚಾರಣಿಗರನ್ನು ರಕ್ಷಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದ್ದು, ಈಗಾಗಲೇ ಇಬ್ಬರು ಚಾರಣಿಗರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ. ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲು ಹೆಲಿಕಾಪ್ಟರ್ ಗಾಗಿ ಬೇಡಿಕೆ ಸಲ್ಲಿಸಲಾಗಿದ್ದು, ಸ್ಥಳೀಯ ಗ್ರಾಮಸ್ಥರು ಹಾಗೂ ಅರಣ್ಯಾಧಿಕಾರಿಗಳ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.