ಮಹಾರಾಷ್ಟ್ರದ ಹಿಂಗೋಲಿಯಲ್ಲಿ 4.5 ತೀವ್ರತೆಯ ಭೂಕಂಪನ

Update: 2024-07-10 06:39 GMT

ಸಾಂದರ್ಭಿಕ ಚಿತ್ರ (PTI)

ಛತ್ರಪತಿ ಸಂಭಾಜಿನಗರ: ಬುಧವಾರ ಬೆಳಗ್ಗೆ ಮಹಾರಾಷ್ಟ್ರದ ಹಿಂಗೋಲಿಯಲ್ಲಿ 4.5 ರಿಕ್ಟರ್ ಮಾಪಕ ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆಯ ಪರಿಣಾಮ ನಾಂದೇಡ್, ಪರ್ಭನಿ, ಛತ್ರಪತಿ ಸಂಭಾಜಿನಗರ ಹಾಗೂ ವಾಶಿಂ ಜಿಲ್ಲೆಗಳಲ್ಲೂ ಅನುಭವಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಭೂಕಂಪನದಿಂದ ಯಾವುದೇ ಆಸ್ತಿ ಹಾನಿ ಅಥವಾ ಜೀವಹಾನಿ ಸಂಭವಿಸಿದ ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಬುಧವಾರ ಬೆಳಗ್ಗೆ ಸುಮಾರು 7.14 ಗಂಟೆಯ ಸಮಯದಲ್ಲಿ ಭೂಕಂಪನ ಸಂಭವಿಸಿದ್ದು, ಅದರ ಕೇಂದ್ರಬಿಂದು ಹಿಂಗೋಲಿ ಜಿಲ್ಲೆಯ ಕಲ್ಮುನುರಿ ತಾಲ್ಲೂಕಿನ ರಾಮೇಶ್ವರ ತಾಂಡ ಗ್ರಾಮದಲ್ಲಿತ್ತು ಎಂದು ನಾಂದೇಡ್ ಜಿಲ್ಲಾಡಳಿತ ಅಧಿಕಾರಿಯೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷದ ಮಾರ್ಚ್ ತಿಂಗಳಲ್ಲೂ ಕೂಡಾ 4.5 ಹಾಗೂ 3.6 ರಿಕ್ಟರ್ ತೀವ್ರತೆಯ ಭೂಕಂಪನ ಇಲ್ಲಿ ಸಂಭವಿಸಿತ್ತು. ಈ ಭೂಕಂಪನದ ಕೇಂದ್ರ ಬಿಂದು ಹಿಂಗೋಲಿ ಜಿಲ್ಲೆಯ ಕಲ್ಮನುರಿ ತಾಲ್ಲೂಕಿನ ಜಾಂಬ್ ಗ್ರಾಮವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News