ಎಂಟು ಅಗ್ರ ಪಕ್ಷಗಳ ಪೈಕಿ 6,046 ಕೋ.ರೂ. ಆಸ್ತಿ ಹೊಂದಿರುವ ಬಿಜೆಪಿಯೇ ಕುಬೇರ

6,046 crore among the top eight parties. It is the BJP that owns the property

Update: 2023-09-04 16:49 GMT

ಸಾಂದರ್ಭಿಕ ಚಿತ್ರ.| Photo: PTI

ಹೊಸದಿಲ್ಲಿ  : 2021-22ನೇ ವಿತ್ತವರ್ಷದಲ್ಲಿ ಎಂಟು ರಾಷ್ಟ್ರೀಯ ಪಕ್ಷಗಳು 8,829.158 ಕೋ.ರೂ.ಗಳ ಒಟ್ಟು ಆಸ್ತಿಗಳನ್ನು ಘೋಷಿಸಿಕೊಂಡಿದ್ದು, ಈ ಪೈಕಿ ಅತ್ಯಂತ ಶ್ರೀಮಂತ ಪಕ್ಷವಾಗಿರುವ ಬಿಜೆಪಿಯು 6046.81 ಕೋ.ರೂ.ಗಳ ಆಸ್ತಿಯನ್ನು ಘೋಷಿಸಿದೆ. 2020-21ರಲ್ಲಿ ಈ ಪಕ್ಷಗಳು ಘೋಷಿಸಿದ್ದ ಆಸ್ತಿಗಳ ವೌಲ್ಯ 7,297.61 ಕೋ.ರೂ.ಆಗಿತ್ತು ಎಂದು ದಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸೋಮವಾರ ತನ್ನ ವರದಿಯಲ್ಲಿ ತಿಳಿಸಿದೆ.
ವರದಿಯು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಎನ್ಸಿಪಿ, ಬಿಎಸ್ಪಿ, ಸಿಪಿಐ, ಸಿಪಿಎಂ, ಎಐಟಿಸಿ ಮತ್ತು ಎನ್ಪಿಪಿ 2020-21 ಮತ್ತು 2021-22ನೇ ವಿತ್ತವರ್ಷಗಳಿಗೆ ಘೋಷಿಸಿರುವ ಆಸ್ತಿಗಳು ಮತ್ತು ಬಾಧ್ಯತೆಗಳನ್ನು ವಿಶ್ಲೇಷಿಸಿದೆ.
ವರದಿಯ ಪ್ರಕಾರ 2020-21ನೇ ವಿತ್ತವರ್ಷದಲ್ಲಿ ಬಿಜೆಪಿಯು ಒಟ್ಟು 4,990.19 ಕೋ.ರೂ.ಗಳ ಒಟ್ಟು ಆಸ್ತಿಗಳನ್ನು ಘೋಷಿಸಿತ್ತು ಮತ್ತು ಇದು 2021-22ನೇ ಸಾಲಿನಲ್ಲಿ 6,046.81 ಕೋರೂ.ಗಳಾಗಿವೆ (ಶೇ.21.17 ಏರಿಕೆ).
2020-21ರಲ್ಲಿ 691.11 ಕೋ.ರೂ.ಗಳಿದ್ದ ಕಾಂಗ್ರೆಸ್ನ ಘೋಷಿತ ಆಸ್ತಿ ವೌಲ್ಯ 2021-22ರಲ್ಲಿ 805.68 ಕೋ.ರೂ.ಗೆ ಹೆಚ್ಚಿತ್ತು (ಶೇ.16.58 ಏರಿಕೆ) ಎಂದು ವರದಿಯು ಹೇಳಿದೆ.
ಮಾಯಾವತಿ ನೇತೃತ್ವದ ಬಿಎಸ್ಪಿ ತನ್ನ ವಾರ್ಷಿಕ ಘೋಷಿತ ಆಸ್ತಿಗಳಲ್ಲಿ ಇಳಿಕೆಯನ್ನು ತೋರಿಸಿರುವ ಏಕೈಕ ರಾಷ್ಟ್ರೀಯ ಪಕ್ಷವಾಗಿದೆ. 2020-21ರಲ್ಲಿ 732.79 ಕೋ.ರೂ.ಗಳಿದ್ದ ಅದರ ಘೋಷಿತ ಆಸ್ತಿಗಳ ವೌಲ್ಯ 2021-22ರಲ್ಲಿ 690.71 ಕೋ.ರೂ.ಗೆ ಇಳಿದಿದೆ (ಶೇ.5.74 ಕುಸಿತ).
2021-22ರಲ್ಲಿ ತೃಣಮೂಲ ಕಾಂಗ್ರೆಸ್ ನ ಆಸ್ತಿಗಳ ವೌಲ್ಯದಲ್ಲಿ ಭಾರೀ ಏರಿಕೆಯನ್ನು ವರದಿಯು ಬೆಟ್ಟು ಮಾಡಿದೆ. 2020-21ರಲ್ಲಿ 182.001 ಕೋ.ರೂ.ಗಳಿದ್ದ ಅದರ ಘೋಷಿತ ಆಸ್ತಿಗಳ ವೌಲ್ಯ 2021-22ರಲ್ಲಿ 458.10 ಕೋ.ರೂ.ಗೆ ಹೆಚ್ಚಿದೆ (ಶೇ.151.70 ಏರಿಕೆ) ಎಂದು ವರದಿಯು ತಿಳಿಸಿದೆ.
2020-21ರಲ್ಲಿ 30.93 ಕೋ.ರೂ.ಗಳಿದ್ದ ಎನ್ಸಿಪಿಯ ಘೋಷಿತ ಆಸ್ತಿ ಮೌಲ್ಯ 2021-22ರಲ್ಲಿ 74.54 ಕೋ.ರೂ.ಗೆ ಹೆಚ್ಚಿದ್ದರೆ (ಶೇ.16.58 ಏರಿಕೆ) ಈ ಅವಧಿಯಲ್ಲಿ ಸಿಪಿಎಂ ಆಸ್ತಿಗಳು 654.79 ಕೋ.ರೂ.ಗಳಿಂದ 735.77 ಕೋ.ರೂ.ಗೆ ಏರಿದೆ. ಸಿಪಿಐ ಆಸ್ತಿಗಳ ವೌಲ್ಯ 14.50 ಕೋ.ರೂ.ಗಳಿಂದ 15.72 ಕೋ.ರೂ.ಗೆ ಏರಿಕೆಯಾಗಿದೆ ಎಂದು ಎಡಿಆರ್ ವರದಿಯು ತಿಳಿಸಿದೆ.
Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News