ಅಕಾಲಿಕ ಕ್ಯಾನ್ಸರ್ ಸಾವುಗಳ ಪೈಕಿ ಶೇ. 70ರಷ್ಟು ಪ್ರಕರಣಗಳನ್ನು ತಡೆಯಬಹುದಿತ್ತು; ಶೇ. 30 ಪ್ರಕರಣಗಳಿಗೆ ಚಿಕಿತ್ಸೆ ನೀಡಬಹುದಿತ್ತು: ಲ್ಯಾನ್ಸೆಟ್ ವರದಿ

Update: 2023-09-28 11:22 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: 2020ರಲ್ಲಿ ಕ್ಯಾನ್ಸರ್‌ನಿಂದ 5.3 ದಶಲಕ್ಷ ಮಂದಿ ಮರಣ ಹೊಂದಿದ್ದು, ಈ ಪೈಕಿ ಶೇ. 70ರಷ್ಟು ಪ್ರಕರಣಗಳನ್ನು ತಡೆಯಬಹುದಿತ್ತು ಹಾಗೂ ಉಳಿದ ಶೇ. 30ರಷ್ಟು ಪ್ರಕರಣಗಳಿಗೆ ಚಿಕಿತ್ಸೆ ನೀಡಬಹುದಿತ್ತು ಎಂದು ಲ್ಯಾನ್ಸೆಟ್ ಜಾಗತಿಕ ಆರೋಗ್ಯ ಸೇವೆ ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.

ಒಟ್ಟಾರೆ ಮರಣಗಳ ಪೈಕಿ 2.9 ದಶಲಕ್ಷ ಮಂದಿ ಪುರುಷರಾಗಿದ್ದರೆ, 2.3 ದಶ ಲಕ್ಷ ಮಂದಿ ಮಹಿಳೆಯರಾಗಿದ್ದಾರೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. 2020ರ ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್‌ನ ದತ್ತಾಂಶವನ್ನು ಆಧರಿಸಿ ಗ್ಲೋಬೋಕ್ಯಾನ್ ವಿಶ್ಲೇಷಣೆಯ ಮೂಲಕ ಈ ಅಧ್ಯಯನ ವರದಿಯನ್ನು ಸಿದ್ಧಪಡಿಸಲಾಗಿದೆ.

ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಸಂಸ್ಥೆಯು ವಿಶ್ವ ಸಂಸ್ಥೆಯ ವಿಶ್ವ ಆರೋಗ್ಯ ಸಂಸ್ಥೆಯಡಿ ಕ್ಯಾನ್ಸರ್ ಉಂಟಾಗಲು ಕಾರಣವೇನು ಎಂಬ ಕುರಿತು ಸಂಶೋಧನೆ ನಡೆಸುವ ಅಂತರ ಸರ್ಕಾರಿ ಸಂಸ್ಥೆಯಾಗಿದೆ.

2020ರಲ್ಲಿ ತಂಬಾಕು, ಮದ್ಯ, ಸ್ಥೂಲಕಾಯ ಹಾಗೂ ಸೋಂಕಿನ ಕಾರಣಕ್ಕೆ ಜಗತ್ತಿನಾದ್ಯಂತ ಎಲ್ಲ ವಯೋಮಾನದ ಒಟ್ಟು 1.3 ದಶಲಕ್ಷ ಮಹಿಳೆಯರು ಮೃತಪಟ್ಟಿದ್ದಾರೆ. ಮಹಿಳೆಯರಲ್ಲಿನ ಕ್ಯಾನ್ಸರ್‌ಗೆ ಕಾರಣವಾಗುತ್ತಿರುವ ಈ ಅಂಶಗಳ ಕುರಿತು ವ್ಯಾಪಕವಾಗಿ ಕಡಿಮೆ ಅಂದಾಜು ಮಾಡಲಾಗಿದೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News