ಗಣರಾಜ್ಯೋತ್ಸವ 2025: 942 ಪೊಲೀಸ್ ಸಿಬ್ಬಂದಿಗಳಿಗೆ ಶೌರ್ಯ, ಸೇವಾ ಪದಕ ಘೋಷಣೆ
Update: 2025-01-25 12:25 IST

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಗಣರಾಜ್ಯೋತ್ಸವದ ಅಂಗವಾಗಿ ಅಗ್ನಿ ಶಾಮಕ ದಳ, ನಾಗರಿಕ ರಕ್ಷಣೆ ಸೇರಿ ಒಟ್ಟು 942 ಪೊಲೀಸ್ ಸಿಬ್ಬಂದಿಗಳಿಗೆ ಕೇಂದ್ರ ಸರಕಾರ ವಿವಿಧ ಶೌರ್ಯ ಹಾಗೂ ಸೇವಾ ಪದಕಗಳನ್ನು ಶನಿವಾರ ಘೋಷಿಸಿದೆ.
ಪದಕ ಪುರಸ್ಕೃತರಲ್ಲಿ ವೈಯಕ್ತಿಕ ಸಿಬ್ಬಂದಿ, ಅಗ್ನಿ ಶಾಮಕ, ಗೃಹ ರಕ್ಷಕ ಹಾಗೂ ನಾಗರಿಕ ಸೇವಾ ಸಿಬ್ಬಂದಿ ಸೇರಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.
101 ರಾಷ್ಟ್ರಪತಿ ಪದಕಗಳ ಪೈಕಿ, 85 ಮಂದಿ ಪೊಲೀಸ್ ಸಿಬ್ಬಂದಿ, 5 ಮಂದಿ ಅಗ್ನಿ ಶಾಮಕ ಸಿಬ್ಬಂದಿ, 7 ಮಂದಿ ನಾಗರಿಕ ಸೇವಾ ಸಿಬ್ಬಂದಿ ಹಾಗೂ ಗೃಹ ರಕ್ಷಕರು ಹಾಗೂ 4 ಮಂದಿ ಇತರೆ ಸಿಬ್ಬಂದಿಗಳು ಸೇರಿದ್ದಾರೆ.
746 ಸೇವಾ ಪದಕಗಳ ಪೈಕಿ, 634 ಪೊಲೀಸ್, 37 ಅಗ್ನಿಶಾಮಕ, 39 ನಾಗರಿಕ ರಕ್ಷಣಾ ಹಾಗೂ ಗೃಹ ರಕ್ಷಕ ಮತ್ತು ಇತರೆ ಸಿಬ್ಬಂದಿಗಳು ಸೇರಿದ್ದಾರೆ.