ಭಾರತ-ಕೊಲ್ಲಿ- ಯುರೋಪ್ ನಡುವೆ ಬೃಹತ್ ಆರ್ಥಿಕ ಕಾರಿಡಾರ್

Update: 2023-09-09 18:28 GMT

Photo- PTI

ಹೊಸದಿಲ್ಲಿ: ಭಾರತ-ಮಧ್ಯ ಪ್ರಾಚ್ಯ- ಯುರೋಪ್ ಮೂಲಕ ಹಾದು ಹೋಗುವ ಬೃಹತ್ ಆರ್ಥಿಕ ಕಾರಿಡಾರೊಂದನ್ನು ಸ್ಥಾಪಿಸುವುದಾಗಿ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗ ಸಮ್ಮೇಳನದ ಅಧ್ಯಕ್ಷತೆ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ.
‘‘ಇಂದು ನಾವೆಲ್ಲರೂ ಮಹತ್ವದ ಮತ್ತು ಐತಿಹಾಸಿಕ ಭಾಗೀದಾರಿಕೆಯೊಂದನ್ನು ಪ್ರವೇಶಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಕಾರಿಡಾರ್ ಭಾರತ, ಪಶ್ಚಿಮ ಏಶ್ಯ ಮತ್ತು ಯುರೋಪ್ ನಡುವಿನ ಮಹತ್ವದ ಆರ್ಥಿಕ ಬೆಸುಗೆಯ ಮಾಧ್ಯಮವಾಗಿರುವುದು’’ ಎಂದು ಅವರು ಹೇಳಿದರು.
ಈ ಕಾರಿಡಾರ್ನ ವ್ಯಾಪ್ತಿಯಲ್ಲಿ ಭಾರತ, ಯುಎಇ, ಸೌದಿ ಅರೇಬಿಯ, ಐರೋಪ್ಯ ಒಕ್ಕೂಟ, ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಅಮೆರಿಕ ಬರುತ್ತವೆ.ಈ ಯೋಜನೆಯಡಿ, ಭಾರತವನ್ನು ಕೊಲ್ಲಿ ದೇಶಗಳು ಮತ್ತು ಯುರೋಪ್ನೊಂದಿಗೆ ಸಂಪರ್ಕಿಸಲು ರೈಲು ಮತ್ತು ಸಮುದ್ರ ಮಾರ್ಗಗಳನ್ನು ನಿರ್ಮಿಸಲಾಗುವುದು.
Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News