ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆ
ಬಿಜಾಪುರ: ಚತ್ತೀಸ್ಗಡದ ಬಿಜಾಪುರ್ ಜಿಲ್ಲೆಯಲ್ಲಿ ಕೇಂದ್ರಿಯ ಮೀಸಲು ಪೊಲೀಸ್ ಪಡೆಯ ಯೋಧನೊಬ್ಬ ತನ್ನ ಸರ್ವೀಸ್ ಗನ್ ನಿಂದ ತನಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಿಲ್ಲಿಯ ನಿವಾಸಿ ಶಫೀಕ್ ಅಹ್ಮದ್ ಆತ್ಮಹತ್ಯೆ ಮಾಡಿಕೊಂಡ ಯೋಧನೆಂದು ಪೊಲೀಸರು ತಿಳಿಸಿದ್ದಾರೆ.
ಕೋಬ್ರಾ 210 ಬೆಟಾಲಿನ್ ನ ಯೋನಾದ ಶಫೀಕ್ ಎಕೆ ರೈಫಲ್ ನಿಂದ ತಲೆಗೆ ಗುಂಡುಹೊಡೆದುಕೊಂಡಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಶಫಿ ಅಹ್ಮದ್ ನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿರುವಾಗಲೇ ಕೊನೆಯುಸಿರೆಳೆದಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರ ಅಂಜನೇಯ ಆರ್ಶ್ನೆ ತಿಳಿಸಿದ್ದಾರೆ.
ಕೋಬ್ರಾ ಬೆಟಾಲಿಯನ್ ನ ಮೊಕುರ್ ಶಿಬಿರದಲ್ಲಿ ನಿಯೋಜನೆಗೊಂಡಿದ್ದ ಕಮಾಂಡೊ ಶಪೀಕ್ ಬಿಜಾಪುರ್ ಗೆ ಆಗಮಿಸಿದ್ದು, ರಜಾನಿಮಿತ್ತ ದಿಲ್ಲಿಗೆ ತೆರಳವವರಿದ್ದರು ಎಂದು ಅರ್ಶ್ ನ ಸುದ್ದಿಗಾರರಿಗೆ ತಿಳಿಸಿದ್ದರು.
ಕೌಟುಂಬಿಕ ಕಾರಣಗಳಿಂದ ನೊಂದು ಶಫೀಕ್ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದಾಗ್ಯೂ ಯಾವುದೇ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲವೆಂದು ಅವರು ಹೇಳಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುತ್ತಿದೆ ಎದಂವರು ತಿಳಿಸಿದ್ದಾರೆ.