ದಿಲ್ಲಿ ವಿವಿ ಕ್ಯಾಂಪಸ್ ನಲ್ಲಿ ಎಬಿವಿಪಿ ಹಿಂಸಾಚಾರಕ್ಕೆ ಪೊಲೀಸರು, ಸರ್ಕಾರದಿಂದ ಸಾಥ್: ಕಾಂಗ್ರೆಸ್ ಆರೋಪ

Update: 2023-09-21 08:09 GMT

ಕನ್ಹಯ್ಯಾ ಕುಮಾರ್ (Photo: PTI)

ಹೊಸದಿಲ್ಲಿ: ದಿಲ್ಲಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಚುನಾವಣೆಗೆ ಒಂದು ದಿನ ಇರುವಾಗ ಕಾಂಗ್ರೆಸ್‌ ಎಬಿವಿಪಿ ವಿರುದ್ಧ ಆರೋಪದ ಸುರಿಮಳೆ ಸುರಿಸಿದ್ದು, ಕ್ಯಾಂಪಸ್‌ನಲ್ಲಿ ಎಬಿವಿಪಿ ಹಿಂಸಾಚಾರ ನಡೆಸುತ್ತಿದೆ ಎಂದು ಹೇಳಿದೆ. ಅಲ್ಲದೆ, ಅವರ ಗೂಂಡಾಗಿರಿಗೆ ವಿದ್ಯಾರ್ಥಿಗಳೇ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದೆ.

ಎನ್‌ಎಸ್‌ಯುಐ ಮತ್ತು RSS ಬೆಂಬಲಿತ ABVPಯು ವಿದ್ಯಾರ್ಥಿ ಸಂಘಟ ಪ್ರಮುಖ ನಾಲ್ಕು ಸ್ಥಾನಗಳಿಗೆ ಪ್ರಮುಖ ಸ್ಪರ್ಧಿಗಳಾಗಿವೆ.

ದಿಲ್ಲಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಒಕ್ಕೂಟದ (ಡಿಯುಎಸ್‌ಯು) ಚುನಾವಣೆಗೆ ಶುಕ್ರವಾರ ಮತದಾನ ನಡೆಯಲಿದೆ.

ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್, ಎಬಿವಿಪಿ ಹಿಂಸಾಚಾರದಲ್ಲಿ ತೊಡಗಿದ್ದರಿಂದ ಪೊಲೀಸರು ಮತ್ತು ಸರ್ಕಾರವೂ ಸಹಾಯ ಮಾಡಿದೆ ಎಂದು ಆರೋಪಿಸಿದರು.

"ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಕಂಡುಬರುವ ದೃಶ್ಯಗಳು ಬಹಳ ಕಳವಳಕಾರಿಯಾಗಿದೆ. ಇದು ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿದ್ದು, ದೇಶದ ವಿದ್ಯಾರ್ಥಿಗಳು ಮಾತ್ರವಲ್ಲದೆ ವಿಶ್ವದಾದ್ಯಂತ ವಿದ್ಯಾರ್ಥಿಗಳು ಬಂದು ಅಧ್ಯಯನ ಮಾಡುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲಿ, ಹಿಂಸಾಚಾರದ ವೀಡಿಯೊಗಳು ವೈರಲ್ ಆಗುತ್ತಿವೆ, ಇದು ಪೋಷಕರಿಗೆ ತುಂಬಾ ಕಳವಳಕಾರಿಯಾಗಿದೆ." ಎನ್ ಎಸ್ ಯುಐ ಉಸ್ತುವಾರಿಯೂ ಆಗಿರುವ ಕನ್ನಯ್ಯ ಕುಮಾರ್ ಹೇಳಿದರು.

ಕೋವಿಡ್-19 ಕಾರಣದಿಂದಾಗಿ ಮೂರು ವರ್ಷಗಳ ಅಂತರದ ನಂತರ ವಿದ್ಯಾರ್ಥಿಗಳ ಒಕ್ಕೂಟದ ಚುನಾವಣೆಗಳು ನಡೆಯುತ್ತಿವೆ, ಸರ್ಕಾರವು ಕೋವಿಡ್ ಸಾಂಕ್ರಾಮಿಕ ರೋಗವನ್ನು ತನಗೆ ಬೇಕಾದಾಗೆಲ್ಲಾ ಬಳಸಿಕೊಂಡಿದೆ ಎಂದು ಆರೋಪಿಸಿದರು.

ಕೋವಿಡ್ ಆಧಾರದ ಮೇಲೆ, ಒಂದು ಗುಂಪಿಗೆ ಪ್ರಯೋಜನವಾಗಲು ಎರಡು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

"ಹಿಂಸಾಚಾರದಲ್ಲಿ ಪಾಲ್ಗೊಳ್ಳುವವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ... ಅವರು ಏನು ಬೇಕಾದರೂ ಮಾಡಬಹುದು. ಹಾಗಾಗಿ, ನಿರಂತರವಾಗಿ ಎಬಿವಿಪಿ ಹಿಂಸಾಚಾರ ಮತ್ತು ಗೂಂಡಾಗಿರಿಯಲ್ಲಿ ನಿರ್ಲಜ್ಜವಾಗಿ ತೊಡಗಿಸಿಕೊಂಡಿದೆ. ಇಡೀ ಹಿಂಸಾಚಾರದ ವಾತಾವರಣವು ವಿಶ್ವವಿದ್ಯಾನಿಲಯದ ಪ್ರತಿಷ್ಠೆಗೆ ಮಸಿ ಬಳಿದಿದೆ " ಎಂದು ಅವರು ಆರೋಪಿಸಿದರು.

"ಅವರು (ABVP) ಹಿಂಸಾಚಾರದಲ್ಲಿ ತೊಡಗಿದ್ದಾರೆ, ಇತರ ಗುಂಪುಗಳ ಜನರನ್ನು ಥಳಿಸುತ್ತಿದ್ದಾರೆ. ನಂತರ NSUI ಅದನ್ನು ಮಾಡುತ್ತಿದೆ ಎಂದು ಬಿಂಬಿಸುತ್ತಿದ್ದಾರೆ. ನಾನು ಸವಾಲು ಹಾಕುತ್ತೇನೆ, ಒಬ್ಬ NSUI ಸದಸ್ಯರು ಅಂತಹ ಚಟುವಟಿಕೆಗಳ ಭಾಗವಾಗಿದ್ದಾರೆ ಎಂದು ಸಾಬೀತುಪಡಿಸಿದರೆ, ಕ್ರಮ ತೆಗೆದುಕೊಳ್ಳಲಾಗುವುದು," ಅವರು ಹೇಳಿದರು.

"ನಾವು ಹೆದರುವುದಿಲ್ಲ ಮತ್ತು ಚುನಾವಣೆಯಲ್ಲಿ ಈ ಗೂಂಡಾಗಿರಿಯ ವಿರುದ್ಧ ವಿದ್ಯಾರ್ಥಿಗಳಿಂದ ಸೂಕ್ತ ಪ್ರತಿಕ್ರಿಯೆಯನ್ನು ನೀಡಲಾಗುವುದು" ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News