ಕ್ಯಾಂಪಸ್ ಪ್ರವೇಶಿಸಿ ದಾಂಧಲೆ ನಡೆಸಿ, ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ABVP ಕಾರ್ಯಕರ್ತರು; ದಿಲ್ಲಿ ವಿ.ವಿ. ವಿದ್ಯಾರ್ಥಿಗಳ ಆರೋಪ

Update: 2023-08-30 16:27 GMT

Screengrab| Photo : twitter \ @anjali__27

ಹೊಸದಿಲ್ಲಿ: ಎಬಿವಿಪಿ ಕಾರ್ಯಕರ್ತರು ದಿಲ್ಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಪ್ರವೇಶಿಸಿ ದಾಂಧಲೆ ನಡೆಸಿ, ಘೋಷಣೆಗಳನ್ನು ಕೂಗಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ದಿಲ್ಲಿ ವಿ.ವಿ.ಯ ಆಲ್-ವುಮೆನ್ ಮಿರಾಂಡಾ ಹೌಸ್‌ನ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಸೆಪ್ಟಂಬರ್ 22ರಂದು ನಡೆಯಲಿರುವ ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟ (ಡಿಯುಎಸ್‌ಯು)ದ ಚುನಾವಣೆ ಹಿನ್ನೆಲೆಯಲ್ಲಿ ಕ್ಯಾಂಪಸ್‌ನಲ್ಲಿ ಪ್ರಚಾರ ನಡೆಯುತ್ತಿರುವ ನಡುವೆ ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ.

ಮೂರು ವರ್ಷಗಳ ಸುದೀರ್ಘ ಅಂತರದ ಬಳಿಕ ಈ ಚುನಾವಣೆ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಬ್ಬುತ್ತಿರುವ ವೀಡಿಯೊದಲ್ಲಿ ದೊಡ್ಡ ಗುಂಪೊಂದು ವಿಶ್ವವಿದ್ಯಾನಿಲಯದ ಕ್ಯಾಂಪಸ್ ಪ್ರವೇಶಿಸುತ್ತಿರುವುದು ಕಂಡು ಬಂದಿದೆ.

‘‘ಎಬಿವಿಪಿ ಕಾರ್ಯಕರ್ತರು ಅನುಮತಿ ಇಲ್ಲದಿದ್ದರೂ ಕ್ಯಾಂಪಸ್ ಪ್ರವೇಶಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿನಿಯರ ಕುರಿತು ಅಶ್ಲೀಲ ಹೇಳಿಕೆ ನೀಡಿದ್ದಾರೆ’’ ಎಂದು ಮಿರಾಂಡಾ ಹೌಸ್ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿರುವ ಎಐಎಸ್ಎ ಹೇಳಿದೆ. ಡಿಯುಎಸ್‌ಯು ಚುನಾವಣೆಗೆ ಪ್ರಚಾರ ನಡೆಸುತ್ತಿರುವ ಅಭ್ಯರ್ಥಿಗಳೊಂದಿಗೆ ಎಬಿವಿಪಿಯ 15ರಿಂದ 20 ಕಾರ್ಯಕರ್ತರು ಕ್ಯಾಂಪಸ್ ಪ್ರವೇಶಿಸಿದರು. ಅವರು ಕಾಲೇಜು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದರು. ನಮಗೆ ಮಾಹಿತಿ ದೊರೆತ ಬಳಿಕ ನಾವು ಪ್ರಾಂಶುಪಾಲರ ಕೊಠಡಿ ಎದುರು ಪ್ರತಿಭಟನೆಗೆ ಕರೆ ನೀಡಿದೆವು. ಕಾಲೇಜಿನ ಪರವಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿದೆವು ಎಂದು ಎಐಎಸ್ಎಯ ಡಿಯು ಕಾರ್ಯದರ್ಶಿ ಅಂಜಲಿ ಶರ್ಮಾ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News