ಉತ್ತರ ಪ್ರದೇಶದಲ್ಲಿ ದಕ್ಷಿಣ ಏಷ್ಯಾದ ಬೃಹತ್ ಶಸ್ತ್ರಾಸ್ತ್ರ, ಕ್ಷಿಪಣಿ ಸಂಕೀರ್ಣ ತೆರೆದ ಅದಾನಿ ಡಿಫೆನ್ಸ್

Update: 2024-02-26 13:00 GMT

Photo:ndtv.com/india

ಕಾನ್ಪುರ: ಅದಾನಿ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ಸಂಸ್ಥೆಯು ಶಸ್ತ್ರಾಸ್ತ್ರ ಮತ್ತು ಕ್ಷಿಪಣಿ ತಯಾರಿಸುವ ಎರಡು ಬೃಹತ್ ಘಟಕಗಳನ್ನು ಸೋಮವಾರ ಉದ್ಘಾಟಿಸಿತು.

ದಕ್ಷಿಣ ಏಷ್ಯಾದ ಈ ಬೃಹತ್ ಉತ್ಪಾದನಾ ಘಟಕಗಳನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸೇನಾ ಮುಖ್ಯಸ್ಥ ಮನೋಜ್ ಪಾಂಡೆ, ಕೇಂದ್ರೀಯ ಕಮಾಂಡ್ ಲೆಫ್ಟಿನೆಂಟ್ ಜನರಲ್‌ನ ಜಿಒಸಿ-ಇನ್-ಸಿ ಆದ ಎನ.ಎಸ್‌.ರಾಜಾ ಸುಬ್ರಮಣಿ ಹಾಗೂ ಮಾಸ್ಟರ್ ಜನರಲ್ ಆಫ್ ಸಸ್ಟೆನೆನ್ಸ್ ಲೆಫ್ಟಿನೆಂಟ್ ಜನರಲ್ ಅಮರ್‌ದೀಪ್ ಸಿಂಗ್ ಔಜ್ಲಾ ಹಾಗೂ ರಕ್ಷಣಾ ಸಚಿವಾಲಯ ಮತ್ತು ಉತ್ತರ ಪ್ರದೇಶ ಸರಕಾರದ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು.

ರಾಜ್ಯ ಹಾಗೂ ದೇಶದ ಬಲವರ್ಧನೆಗೊಳಿಸುವ ದಿಕ್ಕಿನಲ್ಲಿ ವೈವಿಧ್ಯಮಯ ಸಾಮರ್ಥ್ಯವನ್ನು ಸೃಷ್ಟಿಸುವ ಅದಾನಿ ಡಿಫೆನ್ಸ್‌ನ ಪ್ರಯತ್ನ ಹಾಗೂ ಕೊಡುಗೆಗಳನ್ನು ಅವರು ಶ್ಲಾಘಿಸಿದರು.

ಕಾನ್ಪುರದಲ್ಲಿ 500 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ಈ ಘಟಕಗಳು ಬೃಹತ್ ಸಮಗ್ರ ಶಸ್ತ್ರಾಸ್ತ್ರ ಉತ್ಪಾದನಾ ಸಂಕೀರ್ಣಗಳಾಗಿವೆ. ಈ ಸಂಕೀರ್ಣಗಳು ಸಶಸ್ತ್ರ ಪಡೆಗಳು, ಅರೆಸೇನಾ ಪಡೆಗಳು ಹಾಗೂ ಪೊಲೀಸ್ ಪಡೆಗಳಿಗೆ ಉನ್ನತ ಗುಣಮಟ್ಟದ ಸಣ್ಣ, ಮಧ್ಯಮ ಹಾಗೂ ಭಾರಿ ಸಾಮರ್ಥ್ಯದ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲಿವೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News