ಎಡಿಜಿಪಿ-ಆರೆಸ್ಸೆಸ್ ಸಭೆ: ರಾಜಕೀಯ ಮಧ್ಯಸ್ಥಿಕೆ ವರದಿಗಳನ್ನು ಅಲ್ಲಗಳೆದ ಕೇರಳ ಸಿಎಂ

Update: 2024-09-22 10:21 GMT

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (PTI)

ತಿರುವನಂತಪುರಂ: ರಾಜಕೀಯ ಉದ್ದೇಶಗಳಿಗಾಗಿ ಪೊಲೀಸರನ್ನು ಮಧ್ಯವರ್ತಿಗಳನ್ನಾಗಿ ಬಳಸಿಕೊಳ್ಳುವುದು ಎಡರಂಗದ ರಾಜಕೀಯ ಶೈಲಿಯಲ್ಲ ಎಂದು ಶನಿವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ.

ಕೇರಳ ರಾಜ್ಯದ ಎಡಿಜಿಪಿ ಹಾಗೂ ಆರೆಸ್ಸೆಸ್ ನಾಯಕರು ಸಭೆ ನಡೆಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟೀಕರಣ ನೀಡಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಿಣರಾಯಿ ವಿಜಯನ್, “ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ಮಧ್ಯಸ್ಥಿಕೆದಾರರಾಗಿ ಆರೆಸ್ಸೆಸ್ ನಾಯಕರನ್ನು ಭೇಟಿ ಮಾಡಿದ್ದಾರೆ ಎಂದು ವಿರೋಧ ಪಕ್ಷಗಳ ನಾಯಕ ವಿ.ಡಿ.ಸತೀಶನ್ ಆರೋಪಿಸಿದ್ದಾರೆ. ವಿರೋಧ ಪಕ್ಷದ ನಾಯಕರು ಪೊಲೀಸರನ್ನು ವಿವಿಧ ಉದ್ದೇಶಗಳಿಗೆ ಮಧ್ಯವರ್ತಿಗಳನ್ನಾಗಿ ಬಳಸಿಕೊಂಡಿರುವ ತಮ್ಮ ಭೂತಕಾಲದ ಅನುಭವದಿಂದ ಇಂತಹ ಹೇಳಿಕೆ ನೀಡಿರುವಂತಿದೆ. ನಮಗೆ ಅಂತಹ ಅಭ್ಯಾಸವಿಲ್ಲ” ಎಂದು ತಿರುಗೇಟು ನೀಡಿದ್ದಾರೆ.

ಆದರೆ, ಎಡಿಜಿಪಿ ಅಜಿತ್ ಕುಮಾರ್ ಆರೆಸ್ಸೆಸ್ ನಾಯಕರೊಂದಿಗೆ ಸಭೆ ನಡೆಸಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ.

ಈ ಕುರಿತು ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News