ಮಧ್ಯಪ್ರದೇಶ: ಠಾಣೆಯ ಕಿಟಕಿಗೆ ಕಟ್ಟಿಹಾಕಿ ಟೀ ವ್ಯಾಪಾರಿಗೆ ಥಳಿತ; ಸಬ್ ಇನ್ಸ್ ಪೆಕ್ಟರ್ ಅಮಾನತು

Update: 2024-09-22 06:33 GMT

Photo: NDTV

ಮಧ್ಯಪ್ರದೇಶ: ಬೇತುಲ್‌ನ ಪೊಲೀಸ್ ಠಾಣೆಯೊಂದರಲ್ಲಿ ಟೀ ವ್ಯಾಪಾರಿಯನ್ನು ಕಿಟಕಿಗೆ ಕಟ್ಟಿಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಲ್ತಾಯಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಟೀ ಮಾರುವ ವ್ಯಕ್ತಿಯನ್ನು ಕತ್ತಿನ ಹಿಂಬಾಗಕ್ಕೆ ಕೋಲು ಇಟ್ಟು ಕಿಟಕಿಯ ಗ್ರಿಲ್‌ಗೆ ಕಟ್ಟಿಹಾಕಿರುವುದನ್ನು ವೀಡಿಯೊ ತೋರಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವಿಡಿಯೋ ವೈರಲ್ ಬಳಿಕ ಸಂತ್ರಸ್ತ ಅಜಯ್ ಫರ್ಕಡೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ನಿಶ್ಚಲ್ ಝರಿಯಾ ಈ ಕುರಿತು ಪ್ರತಿಕ್ರಿಯಿಸಿದ್ದು, ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಳ್ಳಲಾಗಿದೆ. ಸಂತ್ರಸ್ತನ ದೂರಿನ ಬಳಿಕ ಸಬ್ ಇನ್‌ಸ್ಪೆಕ್ಟರ್ ಸುನೀಲ್ ಸರಿಯಂ ಅವರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆಗೆ ಆದೇಶಿಸಿದ್ದು, ವರದಿ ಆಧರಿಸಿ ಮುಂದಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಅಜಯ್ ಫರ್ಕಡೆ ಮಲ್ಟಿಟೇಲ್ ಬಸ್ ನಿಲ್ದಾಣದಲ್ಲಿ ಚಹಾ ಮತ್ತು ತಿಂಡಿ ಅಂಗಡಿಯನ್ನು ನಡೆಸುತ್ತಿದ್ದರು. ಸೆ.18ರ ರಾತ್ರಿ ಪೊಲೀಸರು ಅವರನ್ನು ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದಾನೆ ಎಂಬ ಅನುಮಾನದ ಮೇಲೆ ಠಾಣೆಗೆ ಕರೆದೊಯ್ದು ಕಿಟಕಿಯ ಗ್ರಿಲ್‌ಗೆ ಕಟ್ಟಿ ಹಾಕಿ ಥಳಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News