ಮತಎಣಿಕೆ ವೇಳೆ ಮಾರ್ಗಸೂಚಿಗಳ ಪಾಲನೆ : ಚುನಾವಣಾ ಆಯೋಗಕ್ಕೆ ‘ಇಂಡಿಯಾ’ ಆಗ್ರಹ

Update: 2024-06-02 17:11 GMT

ಚುನಾವಣಾ ಆಯೋಗ | PC : PTI 

ಹೊಸದಿಲ್ಲಿ : ‘ಇಂಡಿಯಾ’ ಮೈತ್ರಿಕೂಟದ ನಾಯಕರ ನಿಯೋಗವೊಂದು ರವಿವಾರ ಚುನಾವಣಾ ಆಯೋಗದ ಪೂರ್ಣ ಪೀಠವನ್ನು ಭೇಟಿಯಾಗಿ, ಮತಎಣಿಕೆ ದಿನವಾದ ಜೂ.4ರಂದು ಇವಿಎಂ ಫಲಿತಾಂಶ ಪ್ರಕಟಣೆಗೆ ಮುನ್ನ ಅಂಚೆ ಮತದಾನದ ವಿವರಗಳ ಘೋಷಣೆ ಸೇರಿದಂತೆ ಎಲ್ಲ ಮಾರ್ಗಸೂಚಿಗಳು ಪಾಲನೆಯಾಗುವಂತೆ ನೋಡಿಕೊಳ್ಳುವಂತೆ ಆಗ್ರಹಿಸಿತು.

ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಅಭಿಷೇಕ ಸಿಂಘ್ವಿಯವರು, ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರ ನಿಯೋಗ ಮೂರನೇ ಸಲ ಆಯೋಗವನ್ನು ಭೇಟಿಯಾಗಿದ್ದು, ಮತಎಣಿಕೆ ವೇಳೆ ಎಲ್ಲ ಮಾರ್ಗಸೂಚಿಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವಂತೆ ಆಗ್ರಹಿಸಿದೆ ಎಂದು ತಿಳಿಸಿದರು.

‘2-3 ಪ್ರಮುಖ ವಿಷಯಗಳನ್ನು ನಾವು ಪ್ರಸ್ತಾಪಿಸಿದ್ದೇವೆ. ಅತ್ಯಂತ ಮುಖ್ಯವಾಗಿದ್ದು ಮೊದಲು ಅಂಚೆ ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ. ಇದು ಶಾಸನಬದ್ಧ ನಿಯಮವಾಗಿದೆ. ಆದರೆ ಇದು ಪಾಲನೆಯಾಗುತ್ತಿಲ್ಲ ಎನ್ನುವುದು ನಮ್ಮ ದೂರು ಆಗಿದೆ’ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News