13 ವರ್ಷಗಳ ಬಳಿಕ ಹಾಕಿ ಇಂಡಿಯಾ ಸಿಇಒ ಎಲೀನಾ ನೋರ್ಮನ್ ರಾಜೀನಾಮೆ

Update: 2024-02-27 15:05 GMT

ಎಲೀನಾ ನೋರ್ಮನ್ | Photo: ANI

ಹೊಸದಿಲ್ಲಿ: ತಿಂಗಳುಗಳ ಊಹಾಪೋಹಗಳ ಬಳಿಕ, ಹಾಕಿ ಇಂಡಿಯಾದ ದೀರ್ಘಾವಧಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲೀನಾ ನೋರ್ಮನ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ.

ಭಾರತದಲ್ಲಿ ಹಾಕಿಯ ಆಡಳಿತ ಮಂಡಳಿ ಎಂಬುದಾಗಿ ಹಾಕಿ ಇಂಡಿಯಾಕ್ಕೆ ಮಾನ್ಯತೆ ಲಭಿಸಿದ ಸ್ವಲ್ಪವೇ ಸಮಯದ ಬಳಿಕ, ಆಸ್ಟ್ರೇಲಿಯದ ಎಲೀನಾ 2011ರಲ್ಲಿ ಅದರ ಉಸ್ತುವಾರಿಯನ್ನು ವಹಿಸಿಕೊಂಡರು. ಅದಕ್ಕೂ ಹಿಂದೆ ಭಾರತೀಯ ಹಾಕಿ ಫೆಡರೇಶನ್ ಅಸ್ತಿತ್ವದಲ್ಲಿತ್ತು. ಅದನ್ನು ಅಮಾನತುಗೊಳಿಸಿದ ಬಳಿಕ, ವರ್ಷಗಳ ಕಾಲ ಕಾನೂನು ಸಮರ ಮತ್ತು ಆಡಳಿತದಲ್ಲಿನ ನ್ಯೂನತೆ ಮುಂದುವರಿದಿತ್ತು.

ಅದೆಲ್ಲಾ ಒಂದು ಹಂತಕ್ಕೆ ಬಂದ ಬಳಿಕ, ಎಲೀನಾ ಹಾಕಿ ಇಂಡಿಯಾದ ಸಿಇಒ ಆಗಿ ಅಧಿಕಾರ ವಹಿಸಿಕೊಂಡರು.

ಅವರು ಅಂದಿನ ಹಾಕಿ ಇಂಡಿಯಾ ಮಹಾಕಾರ್ಯದರ್ಶಿಯಾಗಿದ್ದ ನರೀಂದರ್ ಬಾತ್ರಾರ ನಿಕಟವರ್ತಿಯಾಗಿದ್ದರು. ಬಳಿಕ ಬಾತ್ರಾ ಹಾಕಿ ಇಂಡಿಯಾ ಅಧ್ಯಕ್ಷ, ಇಂಟರ್ನ್ಯಾಶನಲ್ ಹಾಕಿ ಫೆಡರೇಶನ್ ನ ಅಧ್ಯಕ್ಷ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷರಾದರು. ಈ ಅವಧಿಯಲ್ಲಿ ಎಲೀನಾ ಹಾಕಿ ಇಂಡಿಯಾಕ್ಕೆ ವೃತ್ತಿಪರತೆಯನ್ನು ತರಲು ಶ್ರಮಿಸಿದರು ಮತ್ತು ಅದರಲ್ಲಿ ಯಶಸ್ವಿಯಾದರು. ಆ ಅವಧಿಯಲ್ಲಿ ಭಾರತೀಯ ಕ್ರೀಡಾ ಸಂಸ್ಥೆಗಳಲ್ಲಿ ವೃತ್ತಿಪರತೆ ಎನ್ನುವುದು ದುರ್ಲಭವಾಗಿತ್ತು.

ಅದೇ ವೇಳೆ, ಅವರ ನಿರ್ದಯಿ ವಿಧಾನಗಳು ಹಲವರ ಅಸಹನೆಗಳಿಗೆ ಕಾರಣವಾದವು.

ದಿಲೀಪ್ ತಿರ್ಕೆ ಹಾಕಿ ಇಂಡಿಯಾದ ಅಧ್ಯಕ್ಷರಾದ ಬಳಿಕ ಅವರ ಬೆಂಬಲದ ಹೊರತಾಗಿಯೂ, ತಾನು ಸೋಲುವ ಯುದ್ಧವೊಂದರಲ್ಲಿ ಹೋರಾಡುತ್ತಿರುವುದಾಗಿ ಸ್ವಲ್ಪ ಸಮಯದ ಹಿಂದೆ ಎಲೀನಾ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News