ಅಯೋಧ್ಯೆ ಬಳಿಕ ಕಾಶಿ, ಮಥುರಾ ಬೇಡಿಕೆ ಮುಂದಿಟ್ಟ ಎಂದು ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್
ಲಕ್ನೋ: ಪಾಂಡವರಿಗಾಗಿ ಕೃಷ್ಣ ಐದು ಗಾಮಗಳನ್ನು ನೀಡುವಂತೆ ಕೇಳಿದ್ದ. ಆದರೆ ಹಿಂದೂಗಳು ಮೂರು ದೇವರ ಶ್ರದ್ಧಾಸ್ಥಳಗಳನ್ನಷ್ಟೇ ಕೇಳುತ್ತಿದ್ದೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಬುಧವಾರ ವಿಧಾನಸಭೆಯಲ್ಲಿ ಹೇಳಿದರು. ಹೀಗೆ ಕಾಶಿ, ಮಥುರಾ ಮತ್ತು ಪುರಾಣ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಅನುರಣಿಸಿತು. ಮಥುರಾ ಹಾಗೂ ವಾರಾಣಾಸಿಯ ವಿವಾದಿತ ಸ್ಥಳಗಳಲ್ಲಿರುವ ದೇಗುಲಗಳನ್ನು ಬಿಟ್ಟುಕೊಡುವಂತೆ ಬಿಜೆಪಿಯ ಪ್ರಮುಖ ಮುಖಂಡರೊಬ್ಬರು ಆಗ್ರಹಿಸಿದ ಮೊದಲ ನಿದರ್ಶನ ಇದಾಗಿದೆ.
ತಮ್ಮ ಆಗ್ರಹವನ್ನು ಸಮರ್ಥಿಸಲು ರಾಮಧಾರಿ ಸಿಂಗ್ ದಿನಕರ್ ಅವರ ರಶ್ಮಿರತಿ ಕೃತಿಯಿಂದ "ಕೃಷ್ಣ ಕಿ ಚೇತವಾನಿ"ಯನ್ನು ಕವಿತೆಯನ್ನು ಉದಾಹರಣೆ ನೀಡಿದರು.
ಮಸೀದಿ ನಿರ್ಮಿಸಲು ಮಥುರಾ ಕೇಶವದೇವ ದೇಗುಗಲವನ್ನು ಧ್ವಂಸಗೊಳಿಸಲಾಗಿತ್ತು ಎಂದು ಕಳೆದ ವಾರ ಎಎಸ್‍ಐ ಹೇಳಿಕೆ ನೀಡಿತ್ತು.
"ಅಯೋಧ್ಯೆಯಲ್ಲಿ ಅನ್ಯಾಯ ಮಾಡಲಾಯಿತು. ಅನ್ಯಾಯದ ಬಗ್ಗೆ ನಾನು ಮಾತನಾಡುವಾಗ, 5000 ವರ್ಷಗಳ ಹಿಂದೆ ನಡೆದದ್ದನ್ನು ನಾವು ಮಾತನಾಡುತ್ತೇವೆ... ಕಳೆದ ಹಲವು ವರ್ಷಗಳಿಂದ ಹಿಂದೂ ಸಮಾಜ ಕೇವಲ ಮೂರು ಸ್ಥಳಗಳ ಬಗ್ಗೆ ಮಾತ್ರವೇ ಮಾತನಾಡುತ್ತಿದೆ. ಇವು ದೇವರೇ ಅವತರಿಸಿದ ಮೂರು ವಿಶೇಷ ಸ್ಥಳಗಳು" ಎಂದು ಬಣ್ಣಿಸಿದರು.
ಮಹಾಭಾರತ ಕಥಾನಕದ ಭಾಗವನ್ನು ಉದಾಹರಿಸಿದ ಅವರು, ಪಾಂಡವರಿಗೆ ಐದು ಗ್ರಾಮಗಳನ್ನು ನೀಡಲು ಧುರ್ಯೋಧನ ನಿರಾಕರಿಸಿದ್ದು, ಯುದ್ಧಕ್ಕೆ ಕಾರಣವಾಯಿತು. ಇಲ್ಲಿ ಕೂಡಾ ಬಿಗಿತವಿದೆ. ಅದು ರಾಜಕೀಯ ಲೇಪನದ ಬಿಗಿ ನಿಲುವು. ಇದನ್ನು ಮತ ಬ್ಯಾಂಕ್ ರಾಜಕೀಯವಾಗಿ ಮಾಡುವ ಪ್ರಯತ್ನ ನಡೆಯಿತು. ಇದು ವಿವಾದಕ್ಕೆ ಕಾರಣವಾಯಿತು" ಎಂದು ವಿಶ್ಲೇಷಿಸಿದರು.