ತಾಂತ್ರಿಕ ದೋಷ: ದಿಲ್ಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ
Update: 2025-01-07 11:16 GMT
ಬೆಂಗಳೂರು: ಮಾರ್ಗಮಧ್ಯದಲ್ಲಿ ಒಂದು ಎಂಜಿನ್ ಸ್ಥಗಿತಗೊಂಡಿದ್ದರಿಂದ ದಿಲ್ಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವೊಂದು ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ ಎಂದು ಬೆಂಗಳವಾರ ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ರವಿವಾರ ಸಂಜೆ 7 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಿಲ್ಲಿಯತ್ತ ವಿಮಾನ ಸಂಖ್ಯೆ 2820 ಟೇಕಾಫ್ ಮಾಡಿತು. ಆದರೆ, ಕೆಲ ಕಾಲ ಬೆಂಗಳೂರು ಸುತ್ತಮುತ್ತ ಹಾರಾಟ ನಡೆಸಿದ ವಿಮಾನವು ಒಂದು ಗಂಟೆಯ ನಂತರ ವಿಮಾನ ನಿಲ್ದಾಣಕ್ಕೆ ಮರಳಿತು ಎಂದೂ ಹೇಳಿವೆ.
“ಈ ಘಟನೆಯು ಮೊನ್ನೆ ನಡೆದಿದೆ. ನಮಗೆ ತಾಂತ್ರಿಕ ವಿವರಗಳ ಕುರಿತು ತಿಳಿದಿಲ್ಲ. ಆದರೆ, ವಿಮಾನವು ತುರ್ತು ಭೂಸ್ಪರ್ಶ ನಡೆಸಿತು” ಎಂದು ಮೂಲಗಳು PTI ಸುದ್ದಿ ಸಂಸ್ಥೆಗೆ ತಿಳಿಸಿವೆ. ಯಾವುದೇ ಅಹಿತಕರ ಘಟನೆ ಜರುಗಿಲ್ಲ ಹಾಗೂ ಎಲ್ಲ ಪ್ರಯಾಣಿಕರೂ ಸುರಕ್ಷಿತರಾಗಿದ್ದರು ಎಂದೂ ಹೇಳಿವೆ.