ದಿಲ್ಲಿಯಲ್ಲಿ ಇನ್ನಷ್ಟು ಹದಗೆಟ್ಟ ವಾಯು ಗುಣಮಟ್ಟ

Update: 2024-11-15 15:05 GMT

PC :  PTI 

ಹೊಸದಿಲ್ಲಿ: ದಿಲ್ಲಿಯ ಹೆಚ್ಚಿನ ಭಾಗಗಳು ಹಾಗೂ ನೋಯ್ಡಾ, ಗಾಝಿಯಾಬಾದ್ ಹಾಗೂ ಗುರುಗ್ರಾಮ ಸೇರಿದಂತೆ ಅದರ ನೆರೆಯ ಪ್ರದೇಶಗಳಲ್ಲಿ ನಿರಂತರ ಮೂರನೇ ದಿನವಾದ ಶುಕ್ರವಾರ ಕೂಡ ಮಲೀನ ಹೊಗೆ ಆವರಿಸಿಕೊಂಡಿದೆ.

ಹಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ) ಗಂಭೀರ ಮಟ್ಟಕ್ಕೆ ತಲುಪಿರುವುದರಿಂದ ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲ್ಯಾನ್ (ಜಿಆರ್‌ಎಪಿ) ಸ್ಟೇಜ್ 3ರ ಅಡಿಯಲ್ಲಿ ಮಾಲಿನ್ಯ ತಡೆ ಜಾರಿಗೆ ಬಂದಿದೆ.

ಸ್ವಿಸ್ ಏರ್ ಟೆಕ್ನಾಲಜಿ ಕಂಪೆನಿಯ ಐಕ್ಯುಏರ್ ಪ್ರಕಾರ ದಿಲ್ಲಿಯ ಕೆಲವು ಭಾಗಗಳಲ್ಲಿ ಎಕ್ಯುಐ 800 ಹಾಗೂ 1,100ರ ನಡುವೆ ಇದೆ. ಇದನ್ನು ಅಪಾಯಕಾರಿ ಎಂದು ವರ್ಗೀಕರಿಸಲಾಗಿದೆ. ಆನಂದ್ ವಿಹಾರ್, ದ್ವಾರಕಾ ಸೆಕ್ಟರ್ 8 ಹಾಗೂ ವಸಂತ್ ವಿಹಾರ್ (ವಿವಿ) ಬ್ಲಾಕ್ ಸಿಯಲ್ಲಿ ಅತ್ಯಧಿಕ ಎಕ್ಯುಐ ಮಟ್ಟ ಕ್ರಮವಾಗಿ 1,105, 1,057 ಹಾಗೂ 1,041 ದಾಖಲಾಗಿದೆ.

ಸರಕಾರದ ನಿಗಾ ಕೇಂದ್ರಗಳ ಜಾಗತಿಕ ಜಾಲ ಹಾಗೂ ತನ್ನ ಸ್ವಂತ ಸೆನ್ಸಾರ್‌ಗಳಿಂದ ಸಂಗ್ರಹಿಸಿದ ದತ್ತಾಂಶವನ್ನು ಬಳಸಿಕೊಂಡು ಐಕ್ಯುಏರ್ ಎಕ್ಯುಐಯನ್ನು ಲೆಕ್ಕ ಹಾಕಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News