ವಿಮಾನ ತುರ್ತು ಭೂಸ್ಪರ್ಶ | ಅಸ್ವಸ್ಥಗೊಂಡಿದ್ದ ಇರಾಕ್ ಬಾಲಕಿ ಸಾವು

Update: 2024-09-26 16:26 GMT

ಸಾಂದರ್ಭಿಕ ಚಿತ್ರ

ಕೋಲ್ಕತಾ : ಬಾಗ್ದಾದ್‌ನಿಂದ ಚೀನಾದ ಗುವಾಂಗ್‌ರೆಗೆ ತೆರಳುತ್ತಿದ್ದ ಇರಾಕಿ ಏರ್‌ವೇಸ್‌ನ ವಿಮಾನವೊಂದು ವೈದ್ಯಕೀಯ ತುರ್ತಿನ ಹಿನ್ನೆಲೆಯಲ್ಲಿ ಕೋಲ್ಕತ್ತಾದ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ವಿಮಾನದಲ್ಲಿದ್ದ 16 ವರ್ಷದ ಇರಾಕ್ ಬಾಲಕಿಗೆ ಅಸ್ವಸ್ಥತೆ ಉಂಟಾಗಿತ್ತು. ಆಕೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಳು. ಈ ಹಿನ್ನೆಲೆಯಲ್ಲಿ ಕೂಡಲೇ ವಿಮಾನ ಐಎ-473ರ ಪಥ ಬದಲಾಯಿಸಲಾಯಿತು ಹಾಗೂ ಬುಧವಾರ ರಾತ್ರಿ 10.18ಕ್ಕೆ ಇಲ್ಲಿನ ನೇತಾಜಿ ಸುಭಾಷ್‌ಚಂದ್ರ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.

ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿದ ಕೂಡಲೇ ಬಾಲಕಿಯ ಆರೋಗ್ಯ ತಪಾಸಣೆ ನಡೆಸಲು ವೈದ್ಯಕೀಯ ತಂಡವನ್ನು ಸಿದ್ಧವಾಗಿ ಇರಿಸಲಾಗಿತ್ತು ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿ ಬಾಲಕಿಯ ಪರಿಶೀಲನೆ ನಡೆಸಿದರು. ಆದರೆ ನಾಡಿ ಮಿಡಿತ ಕಂಡು ಬರಲಿಲ್ಲ. ಅವರು ಮುಂದಿನ ಪರಿಶೀಲನೆಗೆ ನಗರದಲ್ಲಿರುವ ಹತ್ತಿರದ ಆಸ್ಪತ್ರೆಗೆ ಶಿಫಾರಸು ಮಾಡಿದರು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವಕ್ತಾರರು ತಿಳಿಸಿದ್ದಾರೆ.

ಅನಂತರ ಆಕೆಯನ್ನು ನಗರದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು ಎಂದು ಅವರು ತಿಳಿಸಿದ್ದಾರೆ.

ವಿಮಾನದಲ್ಲಿ 100 ಪ್ರಯಾಣಿಕರು ಹಾಗೂ 15 ಸಿಬ್ಬಂದಿ ಇದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News