ಜಗತ್ತಿನ ಟಾಪ್ 100 ಎಂಬಿಎ ಶಿಕ್ಷಣಸಂಸ್ಥೆಗಳ ರ‍್ಯಾಂಕಿಂಗ್‌ ನಲ್ಲಿ ಭಾರತದ 3 ಐಐಎಂಗಳಿಗೆ ಸ್ಥಾನ

Update: 2024-09-26 15:24 GMT

ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್

ಹೊಸದಿಲ್ಲಿ : ಜಗತ್ತಿ ಟಾಪ್ 100 ಎಂಬಿಎ ಶಿಕ್ಷಣ ಸಂಸ್ಥೆಗಳಲ್ಲಿ ದೇಶದ ಮೂರು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಶಿಕ್ಷಣ ಸಂಸ್ಥೆಗಳು ಹಾಗೂ ಹೈದರಾಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಸ್ಥಾನವನ್ನು ಪಡೆದುಕೊಂಡಿದೆ.

ಬೆಂಗಳೂರಿನ ಐಐಎಂ, ಅಹ್ಮದಾಬಾದ್‌ನ ಐಐಎಂ ಹಾಗೂ ಕೋಲ್ಕತಾದ ಐಐಎಂ, ಜಗತ್ತಿನ ಅಗ್ರ 100 ಎಂಬಿಎ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನಪಡೆಯುವಲ್ಲಿ ಸಫಲವಾಗಿವೆ. ಉದ್ಯೋಗ ಲಭ್ಯತೆಯ ರ‍್ಯಾಂಕಿಂಗ್‌ನಲ್ಲಿ ಈ ಮೂರು ಶಿಕ್ಷಣಸಂಸ್ಥೆಗಳು ಅಗ್ರ 50ರ ಶ್ರೇಣಿಯಲ್ಲಿ ಸ್ಥಾನವನ್ನು ಪಡೆದಿವೆ. 2025ರ ಸಾಲಿಗಾಗಿನ ಶ್ರೇಷ್ಠ ಎಂಬಿಎ ಶಿಕ್ಷಣಸಂಸ್ಥೆಗಳ ಕ್ಯೂಎಸ್ ಜಾಗತಿಕ ಪಟ್ಟಿಯಲ್ಲಿ 14 ಪೂರ್ಣಾವಧಿಯ ಭಾರತೀಯ ಎಂಬಿಎ ವಿದ್ಯಾಲಯಗಳು ಸ್ಥಾನವನ್ನು ಪಡೆದುಕೊಂಡಿವೆ. ಅಮೆರಿಕದ ಸ್ಟ್ಯಾನ್‌ಫೋರ್ಡ್ ಬಿಸಿನೆಸ್ ಸ್ಕೂಲ್ ಸತತ ಐದನೇ ವರ್ಷವೂ ಮೊದಲನೇ ಸ್ಥಾನವನ್ನು ಉಳಿಸಿಕೊಂಡಿದೆ.

151ರಿಂದ 200ವರೆಗಿನ ರ‍್ಯಾಂಕಿಂಗ್ ಶ್ರೇಣಿಯಲ್ಲಿ ಕೇರಳ ಕೋಝಿಕ್ಕೋಡ್ ಐಐಎಂ ಸ್ಥಾನವನ್ನು ಪಡೆದುಕೊಂಡಿದೆ. ಗಾಝಿಯಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಟೆಕ್ನಾಲಜಿ ಹಾಗೂ ಸೊಮೈಯಾ ವಿದ್ಯಾವಿಹಾರ್ ವಿವಿ 251ಪ್ಲಸ್ ಶ್ರೇಣಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.

58 ರಾಷ್ಟ್ರಗಳು ಹಾಗೂ ಪ್ರಾಂತಗಳ ಎಂಬಿಎ ಶಿಕ್ಷಣ ಸಂಸ್ಥೆಗಳ ಸಮೀಕ್ಷೆಯನ್ನು ನಡೆಸಲಾಗಿದೆ. ಜಗತ್ತಿನ 340 ಅತ್ಯುತ್ತಮ ಎಂಬಿಎ ಶಿಕ್ಷಣ ಸಂಸ್ಥೆಗಳು ಹಾಗೂ ಮಾಸ್ಟರ್ಸ್‌ ಮ್ಯಾನೇಜ್‌ಮೆಂಟ್, ಫೈನಾನ್ಸ್, ಮಾರ್ಕೆಟಿಂಗ್, ಬ್ಯುಸಿನೆಸ್ ಅನಾಲಿಟಿಕ್ಸ್ ಹಾಗೂ ಪೂರೈಕ ಸರಪಣಿ ನಿರ್ವಹಣೆಗೆ ಸಂಬಂಧಿಸಿದ ಸರಣಿ ಶಿಕ್ಷಣ ಸಂಸ್ಥೆಗಳನ್ನು ಹೆಸರಿಸಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News