ಬಿಹಾರ | ಜೀವಪುತ್ರಿಕಾ ಉತ್ಸವ ಆಚರಣೆ ; 27 ಮಕ್ಕಳು ಸಹಿತ 46 ಮಂದಿ ನೀರುಪಾಲು
ಪಾಟ್ನಾ : ಮೂರು ದಿನಗಳ ಕಾಲ ಆಚರಿಸಲಾಗುವ ‘ಜೀವಪುತ್ರಿಕಾ’ ಉತ್ಸವದ ಸಂದರ್ಭ ಬಿಹಾರ ರಾಜ್ಯಾದ್ಯಂತ ವಿವಿಧ ನದಿಗಳು ಹಾಗೂ ಕೊಳಗಳಲ್ಲಿ ಭಕ್ತಾದಿಗಳು ಪವಿತ್ರ ಸ್ಥಾನ ಮಾಡುತ್ತಿದ್ದಾಗ ಸಂಭವಿಸಿದ ದುರಂತಗಳಲ್ಲಿ 37 ಮಕ್ಕಳು ಸೇರಿದಂತೆ 46 ಮಂದಿ ನೀರುಪಾಲಾಗಿದ್ದಾರೆ. ಮೃತಪಟ್ಟವರಲ್ಲಿ ಮೂವರು ಮಹಿಳೆಯರೆಂದು ತಿಳಿದುಬಂದಿದೆ.
ಈ ಬಗ್ಗೆ ಬಿಹಾರ ಸರಕಾರವು ಗುರುವಾರ ಹೇಳಿಕೆಯೊಂದನ್ನು ನೀಡಿದ್ದು, ಜೀವಪುತ್ರಿಕಾ ಉತ್ಸವದ ಅಂಗವಾಗಿ ರಾಜ್ಯದ 15 ಜಿಲ್ಲೆಗಳಲ್ಲಿ ಈ ದುರಂತಗಳು ಸಂಭವಿಸಿವೆ.ನೀರುಪಾಲಾದವರಲ್ಲಿ 43 ಮಂದಿಯ ಮೃತದೇಹಗಳು ದೊರೆತಿರುವುದಾಗಿ ತಿಳಿಸಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಪೂರ್ವ ಚಂಪಾರಣ್, ಪಶ್ಚಿಮ ಚಂಪಾರಣ್, ಔರಂಗಾಬಾದ್, ಕೈಮೂರ್, ಬಕ್ಸಾರ್, ಸಿವಾನ್, ರೋಹ್ಟಾಸ್, ಸಾರನ್, ಪಾಟ್ನಾ, ವೈಶಾಲಿ, ಮುಝಾಫರ್‌ಪುರ, ಸಮಷ್ಟಿಪುರ, ಗೋಪಾಲ್‌ಗಂಜ್ ಹಾಗೂಅರ್ವಾಲ್ ಜಿಲ್ಲೆಗಳಲ್ಲಿ ಭಕ್ತಾದಿಗಳು ನೀರುಪಾಲಾದ ಘಟನೆಗಳು ಸಂಭವಿಸಿವೆ.
ಔರಂಗಾಬಾದ್ ಜಿಲ್ಲೆಯಲ್ಲಿ ಎಂಟು ಮಂದಿ, ಕೈಮೂರ್‌ನಲ್ಲಿ ಏಳು ಮಂದಿ, ಪಟ್ನಾ,ಸಾರನ್,ಪೂರ್ವ ಚಂಪಾರಣ್, ಪಶ್ಚಿಮಚಂಪಾರಣ್‌ನಲ್ಲಿ ತಲಾ ಐದು ಮಂದಿ, ರೋಹ್ಟಾಸ್‌ನಲ್ಲಿ ಮೂವರು, ವೈಶಾಲಿಯಲ್ಲಿ ತಲಾ ಇಬ್ಬರು, ಸಮಷ್ಟಿಪುರ ಹಾಗೂ ಮುಝಾಫರ್‌ಪುರದಲ್ಲಿ ತಲಾ ಇಬ್ಬರು, ಗೋಪಾಲ್‌ಗಂಜ್ ಮತ್ತು ಅರ್ವಾಲ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
ಜೀವಪುತ್ರಿಕಾ ಉತ್ಸವಾಚರಣೆ ಸಂದರ್ಭ ಸಂಭವಿಸಿದ ದುರಂತಗಳಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ ಹಾಗೂ ಮೃತರ ಕ್ಷಿುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
2023ರಲ್ಲಿಯೂ ಜೀವುಪುತ್ರಿಕಾ ಉತ್ಸವ ಸಂದರ್ಭ ಪ್ರತ್ಯೇಕ ಘಟನೆಗಳಲ್ಲಿ 22 ಮಂದಿ ಮೃತಪಟ್ಟಿದ್ದರೆಂದು ಬಿಹಾರ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.