ಉಕ್ರೇನ್ ರಾಜಧಾನಿಯ ಮೇಲೆ ವೈಮಾನಿಕ ದಾಳಿ

Update: 2023-11-11 16:57 GMT

ಸಾಂದರ್ಭಿಕ ಚಿತ್ರ (ndtv.com)

ಕೀವ್: ಉಕ್ರೇನ್ ರಾಜಧಾನಿ ಕೀವ್ ಮೇಲೆ ಶನಿವಾರ ವೈಮಾನಿಕ ದಾಳಿ ನಡೆದಿದ್ದು ಭಾರೀ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ಕೀವ್ ನಗರದ ಮೇಯರ್ ವಿಟಾಲಿ ಕ್ಲಿಷ್ಕೊ ಹೇಳಿದ್ದಾರೆ.

ಸೆಪ್ಟಂಬರ್ ಅಂತ್ಯದ ಬಳಿಕ ಕೀವ್ ಮೇಲೆ ನಡೆಯುತ್ತಿರುವ ಪ್ರಥಮ ದಾಳಿ ಇದಾಗಿದೆ. ಕೀವ್ ಪ್ರಾಂತದ ನಿಪ್ರೊ ನದಿಯ ಎಡದಂಡೆಯಲ್ಲಿ ಭಾರೀ ಸ್ಫೋಟ ಕೇಳಿಸಿದೆ. ಬ್ಯಾಲಿಸ್ಟಿಕ್ ಕ್ಷಿಪಣಿ ಬಳಸಿ ನಡೆಸಿದ ದಾಳಿ ಇದಾಗಿರಬಹುದು ಎಂದವರು ಹೇಳಿದ್ದಾರೆ. ಸ್ಫೋಟಗಳು ಕೇಳಿಬರುವ ಕೆಲವೇ ಕ್ಷಣಗಳ ಮೊದಲು ಕೀವ್ ಮತ್ತು ಹತ್ತಿರದ ಪ್ರದೇಶಕ್ಕೆ ವಾಯುದಾಳಿ ಎಚ್ಚರಿಕೆಯನ್ನು ಘೋಷಿಸಿ ನಿವಾಸಿಗಳು ಶೆಲ್ಟರ್‍ನಡಿ ಆಶ್ರಯ ಪಡೆಯಲು ಸೂಚಿಸಲಾಗಿತ್ತು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News