‘ಅಶಿಸ್ತಿನ ನಡವಳಿಕೆ’ ಆರೋಪ: NCP ಕಾರ್ಯಕಾರಿಣಿಯಿಂದ ಕೇರಳ ಶಾಸಕ ಕೆ.ಥೋಮಸ್ ವಜಾ

Update: 2023-08-08 17:42 GMT

Thomas K Thomas. | Photo: PTI 

ತಿರುವನಂತಪುರ: ‘‘ ಗಂಭೀರವಾದ ಅಶಿಸ್ತಿನ ವರ್ತನೆ’’ ಗಾಗಿ NCPಯ ಹಿರಿಯ ನಾಯಕ ಹಾಗೂ ಕೇರಳದ ಶಾಸಕ ಕೆ.ಥೋಮಸ್ ಅವರನ್ನು ಪಕ್ಷದ ಕಾರ್ಯಕಾರಿಣಿ ಸಮಿತಿಯಿಂದ ಕೈಬಿಟ್ಟಿರುವುದಾಗಿ NCP ವರಿಷ್ಠ ಶರದ್ ಪವಾರ್ ಮಂಗಳವಾರ ತಿಳಿಸಿದ್ದಾರೆ.

ಥೋಮಸ್ ಅವರು ಕೇರಳದ ಕುಟ್ಟನಾಡ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಕೇರಳದಲ್ಲಿ ಎನ್ಸಿಪಿಯು ಆಡಳಿತಾರೂಢ ಎಡಪ್ರಜಾಸತ್ತಾತ್ಮಕರಂಗ (ಎಲ್ಡಿಎಫ್)ನ ಅಂಗಪಕ್ಷವಾಗಿದೆ.

ತನ್ನದೇ ಪಕ್ಷದ ಕೆಲವು ಸದಸ್ಯರಿಂದ ತನಗೆ ಜೀವಬೆದರಿಕೆಯದೆಯೆಂದು ಆರೋಪಿಸಿ ಕೆ. ಥೋಮಸ್ ಅವರು ರಾಜ್ಯ ಪೊಲೀಸ್ ವರಿಷ್ಠರಿಗೆ ದೂರು ನೀಡಿದ್ದರು. ಆದರೆ ಅವರ ಈ ಆರೋಪವನ್ನು ರಾಜ್ಯ ಅಧ್ಯಕ್ಷ ಸಿ.ಪಿ.ಚಾಕೋ ನಿರಾಕರಿಸಿದ್ದಾರೆ ಹಾಗೂ ಇದೊಂದು ಅಸಂಬದ್ಧ ಆರೋಪವೆಂದು ಅವರು ಹೇಳಿದ್ದಾರೆ

ತಾನು ಪ್ರತಿನಿಧಿಸುತ್ತಿರುವ ಅಲಪ್ಪುಳ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯಾಗುವಂತೆ ಮಾಡಲು ತನ್ನದೇ ಪಕ್ಷದ ಕೆಲವು ಸದಸ್ಯರು ತನ್ನ ಕೊಲೆಗೆ ಸಂಚು ಹೂಡಿದ್ದಾರೆಂದು ಥಾಮಸ್ ರಾಜ್ಯ ಪೊಲೀಸ್ ವರಿಷ್ಠರಿಗೆ ಸೋಮವಾರ ನೀಡಿದ ದೂರಿನಲ್ಲಿ ಆರೋಪಿಸಿದ್ದರು..

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News