ಸಂಚಾರ ನಿಯಮ ಉಲ್ಲಂಘನೆ ಆರೋಪ: ರ‍್ಯಾಪರ್ ಬಾದಶಾಗೆ 15,000 ರೂ.ದಂಡ
Update: 2024-12-17 17:52 GMT
ಗುರುಗ್ರಾಮ(ಹರ್ಯಾಣ): ಗುರುಗ್ರಾಮ ಪೋಲಿಸರು ಸಂಚಾರ ನಿಯಮ ಉಲ್ಲಂಘನೆಗಾಗಿ ಜನಪ್ರಿಯ ರ‍್ಯಾಪರ್ ಬಾದಶಾಗೆ 15,000 ರೂ.ದಂಡವನ್ನು ವಿಧಿಸಿದ್ದಾರೆ.
ರಾಂಗ್ ಸೈಡ್‌ನಲ್ಲಿ ಜೋರಾಗಿ ಸಂಗೀತ ಹಾಕಿಕೊಂಡು ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಡಿ.15ರಂದು ಘಟನೆ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದರು.
ಬಾದಶಾರ ವಾಹನಗಳ ಸಾಲಿನಲ್ಲಿದ್ದ ಮಹಿಂದ್ರಾ ಥಾರ್ ಪಾಣಿಪತ್ ನಿವಾಸಿ ದೀಪಿಂದರ್ ಮಲಿಕ್ ಹೆಸರಿನಲ್ಲಿ ನೋಂದಣಿಯನ್ನು ಹೊಂದಿತ್ತು.
ಸಂಚಾರ ದಟ್ಟಣೆಯಿಂದಾಗಿ ಬಾದಶಾರ ಕಾರು ರಾಂಗ್‌ಸೈಡ್‌ಗೆ ನುಗ್ಗಿತ್ತು. ಕೆಲವು ದಾರಿಹೋಕರು ಇದನ್ನು ವೀಡಿಯೊ ಚಿತ್ರೀಕರಿಸಿದ್ದು,ಅದರ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಇದನ್ನು ಗಮನಿಸಿದ ಪೋಲಿಸರು ಸೋಮವಾರ ರ‍್ಯಾಪರ್ ಗೆ 15,000 ರೂ.ದಂಡ ವಿಧಿಸಿ ಚಲನ್ ನೀಡಿದ್ದಾರೆ.