ಡ್ರಗ್ಸ್ ಮುಕ್ತ ಭಾರತಕ್ಕೆ ಅಮಿತ್ ಶಾ ಕರೆ

Update: 2024-08-25 16:29 GMT
Photo : PTI

ಹೊಸದಿಲ್ಲಿ : ಮಾದಕದ್ರವ್ಯಗಳು ದೇಶದ ಯುವತಲೆಮಾರಿಗೆ ಹಾಳು ಮಾಡುತ್ತವೆ ಮಾತ್ರವಲ್ಲದೆ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರವಿವಾರ ಕಳವಳ ವ್ಯಕ್ತಪಡಿಸಿದ್ದಾರೆ. ಮಾದಕದ್ರವ್ಯ ಜಾಲವನ್ನು ಅಮೂಲಾಗ್ರವಾಗಿ ಮೂಲೋತ್ಪಾಟನೆ ಮಾಡಬೇಕೆಂದು ಅವರು

ಮಾದಕದ್ರವ್ಯಗಳು, ಒಂದು ಜಾಗತಿಕ ಪಿಡುಗು ಎಂದು ಬಣ್ಣಿಸಿದ ಅವರು, ‘ಡ್ರಗ್ಸ್ ಮುಕ್ತ ಭಾರತ’ಕ್ಕೆ ಕರೆ ನೀಡಿದ್ದಾರೆ.

ಚತ್ತೀಸ್‌ಗಡದ ರಾಯಪುರದಲ್ಲಿ ಮಾದಕದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ)ಯ ವಲಯ ಘಟಕ ಕಚೇರಿಯನ್ನು ಶಾ ಅವರು ವೀಡಿಯೊ ಮೂಲಕ ಉದ್ಘಾಟಿಸಿದರು. ಚತ್ತೀಸ್‌ಗಡದಲ್ಲಿನ ಮಾದಕದ್ರವ್ಯ ಹಾವಳಿಯ ಕುರಿತ ಪರಾಮರ್ಶನಾ ಸಭೆಯಲ್ಲಿಯೂ ಅವರು ಪಾಲ್ಗೊಂಡರು.

‘‘ ಭಾರತದಾದ್ಯಂತ ನಾವು ಅತ್ಯಂತ ತೀವ್ರತೆ, ಗಂಭೀರತೆ ಹಾಗೂ ಸಮಗ್ರ ಕಾರ್ಯತಂತ್ರದೊಂದಿಗೆ ಮಾದಕದ್ರವ್ಯಗಳ ವಿರುದ್ಧ ಹೋರಾಡಿದಲ್ಲಿ, ನಾವು ಈ ಸಮರವನ್ನು ಗೆಲ್ಲಬಹುದಾಗಿದೆ. ಮಾದಕದ್ರವ್ಯಗಳ ಅಕ್ರಮ ಕಳ್ಳಸಾಗಣೆಯು ರಾಷ್ಟ್ರದ ಭದ್ರತೆಗೆ ತೀವ್ರವಾದ ಹಾನಿಯುಂಟು ಮಾಡಲಿದೆ. ಅಕ್ರಮ ಡ್ರಗ್ಸ್ ಮಾರಾಟದಿಂದ ಗಳಿಸುವ ಹಣವು ಭಯೋತ್ಪಾದನೆ ಹಾಗೂ ಎಡಪಂಥೀಯ ತೀವ್ರವಾದವನ್ನು ಉತ್ತೇಜಿಸುತ್ತದೆ ಹಾಗೂ ದೇಶದ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ’’ ಎಂದವರು ಹೇಳಿದರು.

ಮಾದಕದ್ರವ್ಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ತಳೆಯಲು ಪ್ರತಿಯೊಬ್ಬರೂ ಮುಂದೆ ಬರಬೇಕಾಗಿದೆ ಹಾಗೂ ಭಾರತವನ್ನು ಡ್ರಗ್ಸ್‌ಮುಕ್ತಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವನ್ನು ಈಡೇರಿಸಬೇಕಾಗಿದೆ’’ಎಂದು ಶಾ ಕರೆ ನೀಡಿದರು.

ಚತ್ತೀಸ್‌ಗಡ ಮುಖ್ಯಮಂತ್ರಿ ವಿಷ್ಣು ದೇವೊ ಸಾಯಿ, ಉಪಮುಖ್ಯಮಂತ್ರಿ ವಿಜಯ ಶರ್ಮಾ ಅವರು ಕೇಂದ್ರ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್, ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ ಮೋಹನ್, ಗುಪ್ತಚರ ದಳದ ನಿರ್ದೇಶಕ ತಪನ್ ಡೇಕಾ, ಎನ್‌ಸಿಬಿಯ ಮಹಾನಿರ್ದೇಶಕರು ಮತ್ತಿತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News