ರೋಡ್ ಶೋ ವೇಳೆ ಕಲ್ಲು ತೂರಾಟ: ಆಂಧ್ರ ಸಿಎಂ ಜಗನ್ ರೆಡ್ಡಿಗೆ ಗಾಯ
Update: 2024-04-13 16:44 GMT
ವಿಜಯವಾಡ: ಶನಿವಾರ ಚುನಾವಣಾ ಪ್ರಚಾರದ ಅಂಗವಾಗಿ ರೋಡ್ ಶೋ ನಡೆಸುತ್ತಿದ್ದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮೇಲೆ ಕಲ್ಲು ತೂರಾಟ ನಡೆದಿದ್ದು, ಅವರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.
ವಿಜಯವಾಡದಲ್ಲಿ ‘ಮೇಮಂತ ಸಿದ್ಧಂ’ (ನಾವೆಲ್ಲ ಸಿದ್ಧ) ಬಸ್ ಯಾತ್ರೆ ನಡೆಸುತ್ತಿದ್ದ ಜಗನ್ ಮೋಹನ್ ರೆಡ್ಡಿ ಮೇಲೆ ನಡೆದ ಕಲ್ಲು ತೂರಾಟದಲ್ಲಿ ಅವರಿಗೆ ಗಾಯವಾಗಿದೆ ಎಂದು ವರದಿಯಾಗಿದೆ.
AP CM Y S Jagan Mohan Reddy was injured during #MemanthaSiddham roadshow in Vijaywada. Stone was pelted along with flowers at him. He was given first aid immediately pic.twitter.com/xf4mvTIUh8
— Naveena (@TheNaveena) April 13, 2024