ಅರುಣಾಚಲ ಪ್ರದೇಶ, ಅಕ್ಸೈ ಚಿನ್‌ ತನ್ನದೆಂದು ಬಿಂಬಿಸಿದ ಚೀನಾದ ನಕಾಶೆಗೆ ಭಾರತದ ಆಕ್ಷೇಪ

Update: 2023-08-29 16:58 GMT

Photo: indiatoday.in

ಹೊಸದಿಲ್ಲಿ: ಅರುಣಾಚಲ ಪ್ರದೇಶ ಮತ್ತು ಅಕ್ಸೈ ಚಿನ್ ಗಳನ್ನು ಚೀನಿ ಪ್ರದೇಶಗಳನ್ನಾಗಿ ತೋರಿಸಿರುವ ನಕಾಶೆಯ ಕುರಿತು ಭಾರತವು ಚೀನಾಕ್ಕೆ ಬಲವಾದ ಪ್ರತಿಭಟನೆಯನ್ನು ಸಲ್ಲಿಸಿದೆ. ಭಾರತದ ಭೂಪ್ರದೇಶದ ಮೇಲೆ ಹಕ್ಕು ಪ್ರತಿಪಾದಿಸಿರುವ ಚೀನಾದ ತಥಾಕಥಿತ ‘ಪ್ರಮಾಣಿತ ನಕಾಶೆ ’ಯ ಕುರಿತು ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾಕ್ಕೆ ಪ್ರತಿಭಟನೆಯನ್ನು ಸಲ್ಲಿಸಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಮಂಗಳವಾರ ಇಲ್ಲಿ ತಿಳಿಸಿದರು.

ಇಂತಹ ಆಧಾರರಹಿತ ಹಕ್ಕು ಪ್ರತಿಪಾದನೆಗಳನ್ನು ಭಾರತವು ತಿರಸ್ಕರಿಸುತ್ತದೆ. ಚೀನಾದ ಕಡೆಯಿಂದ ಇಂತಹ ಕ್ರಮವು ಗಡಿ ಪ್ರಶ್ನೆಯನ್ನು ಬಗೆಹರಿಸುವುದನ್ನು ಜಟಿಲಗೊಳಿಸುತ್ತದೆ,ಅಷ್ಟೇ ಎಂದರು.

‘ಅದು ಅವರ (ಚೀನಾ) ಹಳೆಯ ಚಟವಾಗಿದೆ. ಈ ಪ್ರದೇಶಗಳು ಭಾರತದ ಭಾಗವಾಗಿವೆ. ನಮ್ಮ ಸರಕಾರವು ಈ ಬಗ್ಗೆ ಸ್ಪಷ್ಟವಾಗಿದೆ. ಅಸಂಬದ್ಧ ಹೇಳಿಕೆಗಳನ್ನು ನೀಡುವುದರಿಂದ ಇತರರ ಪ್ರದೇಶಗಳು ನಿಮ್ಮದಾಗುವುದಿಲ್ಲ’ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News