ಬಿಜೆಪಿಯ ಡಬಲ್ ಎಂಜಿನ್ ಸರಕಾರದಲ್ಲಿ ನ್ಯಾಯ ಕೇಳುವುದು ಕೂಡ ಅಪರಾಧ: ರಾಹುಲ್ ಗಾಂಧಿ

Update: 2024-03-07 15:19 GMT

ರಾಹುಲ್ ಗಾಂಧಿ | Photo: PTI 

ಹೊಸದಿಲ್ಲಿ: ಇಬ್ಬರು ಬಾಲಕಿಯರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರಾಜ್ಯಗಳಲ್ಲಿ ನ್ಯಾಯ ಕೇಳುವುದು ಅಪರಾಧ ಎಂದು ಅವರು ಹೇಳಿದ್ದಾರೆ.

ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಲಾದ ದಿನಗಳ ಬಳಿಕ ಇಬ್ಬರು ಬಾಲಕಿಯರ ಮೃತದೇಹ ಹೊಲದಲ್ಲಿರುವ ಮರವೊಂದರಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಫೆಬ್ರವರಿ 28ರಂದು ಪತ್ತೆಯಾಗಿತ್ತು. ಕಾನ್ಪುರದ ಘಾಟಂಪುರ ಪ್ರದೇಶದ ಗ್ರಾಮದಲ್ಲಿ ಅವರು ಕೆಲಸ ಮಾಡುತ್ತಿದ್ದ ಇಟ್ಟಿಗೆ ಗೂಡಿನ ಸಮೀಪ ಅವರ ಮೃತದೇಹ ಪತ್ತೆಯಾಗಿತ್ತು.

ಮಧ್ಯಪ್ರದೇಶದಲ್ಲಿ ಮಹಿಳೆಯರೊಬ್ಬರ ಗೌರವಕ್ಕೆ ಧಕ್ಕೆಯಾಗಿದೆ. ಅವರ ಬಡ ಪತಿ ನ್ಯಾಯ ನೀಡುವಂತೆ ಕೋರಿದರು. ನ್ಯಾಯ ಸಿಗದೇ ಇದ್ದಾಗ, ಅವರು ಇಬ್ಬರು ಮಕ್ಕಳೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

‘‘ಈ ಎರಡು ಘಟನೆಗಳ ಮೂಲಕ ನರೇಂದ್ರ ಮೋದಿ ಅವರ ಡಬಲ್ ಎಂಜಿನ್ ಸರಕಾರದಲ್ಲಿ ನಡೆಯುತ್ತಿರುವ ದ್ವಿ ಅನ್ಯಾಯವನ್ನು ಅರ್ಥ ಮಾಡಿಕೊಳ್ಳಿ. ಉತ್ತರಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾದ ಬಳಿಕ ಇಬ್ಬರು ಸಹೋದರಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನ್ಯಾಯ ಸಿಗದೇ ಇದ್ದಾಗ ಹಾಗೂ ಪ್ರಕರಣ ಹಿಂಪಡೆಯುವಂತೆ ಒತ್ತಡ ಹೆಚ್ಚಿದಾಗ ಅವರ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’’ ಎಂದು ಅವರು ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.

ಕೇವಲ ಸಂತ್ರಸ್ತರನ್ನು ಮಾತ್ರವಲ್ಲ. ಬದಲಾಗಿ, ಅವರ ಕುಟುಂಬದವರನ್ನು ಕೂಡ ಶತ್ರುಗಳಂತೆ ನಡೆಸಿಕೊಳ್ಳುವುದು ಬಿಜೆಪಿ ಆಡಳಿತವಿರುವ ರಾಜ್ಯಗಳ ಸಂಪ್ರದಾಯವಾಗಿವೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News