ಅಸ್ಸಾಂನ ಮುಖ್ಯಮಂತ್ರಿಯ ‘ಹುಸೈನ್ ಒಬಾಮಾ’ ಟ್ವೀಟ್ ಗೆ ಕಾಂಗ್ರೆಸ್ ಕಿಡಿ

Update: 2023-06-26 17:17 GMT

ಒಬಾಮಾ| Photo: PTI

ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಶ್ವ ಶರ್ಮಾ ಅವರ ವಿವಾದಾತ್ಮಕ ‘ಹುಸೇನ್ ಒಬಾಮಾ’ ಟ್ವೀಟ್ ಗೆ ಕಾಂಗ್ರೆಸ್ ಪಕ್ಷವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಸ್ಸಾಂ ಮುಖ್ಯಮಂತ್ರಿಯವರು ಭಾರತದ ಅಲ್ಪಸಂಖ್ಯಾತರಿಗೆ ಬಹಿರಂಗವಾಗಿ ಬೆದರಿಕೆಯೊಡ್ಡುತ್ತಿದ್ದಾರೆಂದು ಅದು ಕಿಡಿಕಾರಿದೆ.

ಅಸ್ಸಾಂ ಮುಖ್ಯಮಂತ್ರಿಯ ಈ ವಿವಾದಿತ ಟ್ವೀಟ್ ಬಗ್ಗೆ ತಮ್ಮ ನಿಲುವನ್ನು ವಿವರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವಾಲಯವನ್ನು ಕಾಂಗ್ರೆಸ್ ಆಗ್ರಹಿಸಿದೆ.

ಇತ್ತೀಚೆಗೆ ಪತ್ರಕರ್ತೆ ರೋಹಿಣಿ ಸಿಂಗ್ ಇತ್ತೀಚೆಗೆ ಪ್ರಸಾರ ಮಾಡಿದ್ದ ಟ್ವೀಟ್ ಒಂದರಲ್ಲ , ದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆ ಬಗ್ಗೆ ಒಬಾಮಾ ಅವರ ಹೇಳಿಕೆಯನ್ನು ಪ್ರಸ್ತಾವಿಸುತ್ತಾ, ‘‘ ಭಾವನೆಗಳಿಗೆ ನೋವುಂಟು ಮಾಡಿದ್ದಕಾಗಿ ಒಬಾಮಾ ವಿರುದ್ಧ ಗುವಾಹಟಿಯ ನ್ಯಾಯಾಲಯದಲ್ಲಿ ಶೀಘ್ರವೇ ಎಫ್ಐಆರ್ ದಾಖಲಾಗಲಿದೆಯೇ. ಇಲ್ಲ ಒಬಾಮಾ ಅವರನ್ನು ಯಾವುದಾದರೂ ವಿಮಾನದಿಂದ ಕೆಳಗಿಳಿಸಿ, ಬಂಧಿಸುವುದಕ್ಕಾಗಿ ಅಸ್ಸಾಂ ಪೊಲೀಸರು ವಾಶಿಂಗ್ಟನ್ ತೆರಳಲಿದ್ದಾರೆಯೇ ? ’ ಎಂದು ವ್ಯಂಗ್ಯವಾಡಿದ್ದರು.

ಕಳೆದ ಫೆಬ್ರವರಿಯಲ್ಲಿ ಮೋದಿ ವಿರುದ್ಧ ಆಕ್ಷೇಪಕಾರಿ ಪದಗಳನ್ನು ಬಳಸಿದ್ದಾರೆಂಬ ಆರೋಪದಲ್ಲಿ ಕಾಂಗ್ರೆಸ್ ನಾಯಕ ಪವನ್ಖೇರಾ ಅವರನ್ನು ಅಸ್ಸಾಂ ಪೊಲೀಸರು ವಿಮಾನದಿಂದ ಇಳಿಸಿ ಬಂಧಿಸಿದ ಘಟನೆಯನ್ನು ಪರೋಕ್ಷವಾಗಿ ಉಲ್ಲೇಖಿಸಿ, ರೋಹಿಣಿ ಸಿಂಗ್ ಅವರು ಈ ಟ್ವೀಟ್ ಮಾಡಿದ್ದರು.

ತನ್ನ ವಿರುದ್ಧ ರೋಹಿಣಿ ಶರ್ಮಾ ಅವರ ವಿಡಂಬನಾತ್ಮಕ ಟೀಕೆಯ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದ ಹಿಮಂತ್ ಬಿಶ್ವಾ ಶರ್ಮಾ ಅವರು, ‘‘ ಭಾರತದಲ್ಲಿ ಹಲವಾರು ‘ಹುಸೈನ್ ಒಬಾಮಾ’ಗಳಿದ್ದಾರೆ. ವಾಶಿಂಗ್ಟನ್ ಗೆತೆರಳುವ ಮುನ್ನ ಅವರ ಬಗ್ಗೆ ಜಾಗ್ರತೆ ವಹಿಸುವುದಕ್ಕೆ ನಾವು ಆದ್ಯತೆ ನೀಡುತ್ತೇವೆ ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News