‘ಹಿಂಸಾಚಾರ ಪೀಡಿತ ಮಣಿಪುರಕ್ಕೆ ಮೋದಿ ಭೇಟಿ ಇನ್ನೂ ಇಲ್ಲʼ : ಡೆರೆಕ್ ಓ ಬ್ರಿಯಾನ್

Update: 2024-09-25 15:49 GMT

ಡೆರೆಕ್ ಓ’ಬ್ರಿಯಾನ್ , ನರೇಂದ್ರ ಮೋದಿ | PC : PTI

ಹೊಸದಿಲ್ಲಿ : ಕಳೆದ ವರ್ಷದ ಮೇ ತಿಂಗಳಿಂದ ಜನಾಂಗೀಯ ಘರ್ಷಣೆಗಳು ತಾಂಡವವಾಡುತ್ತಿರುವ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಇನ್ನೂ ಕೂಡಾ ಭೇಟಿ ನೀಡದೆ ಇರುವುದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕತ ಡೆರೆಕ್ ಓ’ಬ್ರಿಯಾನ್ ಬುಧವಾರ ಟೀಕಿಸಿದ್ದಾರೆ ಹಾಗೂ ಪ್ರಧಾನಿಯವರನ್ನು ಅವರು ವಲಸೆ ಹಕ್ಕಿ ಆರ್ಕಿಟಿಕ್ ಟೆರ್ನ್‌ಗೆ ಹೋಲಿಸಿದ್ದಾರೆ.

ಎಕ್ಸ್‌ ನಲ್ಲಿ ‘ಸ್ಟಿಲ್ ನೋ’ ( ಇನ್ನೂ ಇಲ್ಲ) ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ ಮಾಡಿರುವ ಅವರು, ಲೋಕಸಭೆಯ ಉಪಸ್ಪೀಕರ್ ಅವರ ನೇಮಕ ಇನ್ನೂ ನಡೆದಿಲ್ಲ ಹಾಗೂ ಸಂಸದೀಯ ಸಮಿತಿಗಳು ಇನ್ನೂ ಕೂಡಾ ರಚನೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರ್ಕಿಟಿಕ್ ಟರ್ನ್ ಯಾನೆ ಮೋದಿಯವರು ಇನ್ನೂ ಕೂಡಾ ಮಣಿಪುರಕ್ಕೆ ಭೇಟಿ ನೀಡಿಲ್ಲ ಎಂದು ರಾಜ್ಯಸಭೆಯಲ್ಲಿ ಟಿಎಂಸಿ ಸಂಸದೀಯ ಪಕ್ಷದ ನಾಯಕರೂ ಆದ ಡೆರೆಕ್ ಓಬ್ರಿಯಾನ್ ಹೇಳಿದ್ದಾರೆ.

ಪಕ್ಷಿ ಸಂಕುಲದಲ್ಲಿಯೇ ಆರ್ಕಿಟಿಕ್ ಟರ್ನ್ ದೀರ್ಘದೂರದವರೆಗೆ ವಲಸೆಹೋಗುವ ಪಕ್ಷಿಯಾಗಿದೆ. ಅಂಟಾರ್ಕ್ಟಿಕಾ ಖಂಡದಿಂದ ಆರ್ಟಿಟಿಕ್ ಪ್ರದೇಶಕ್ಕೆ ಸಂತಾನೋತ್ಪತ್ತಿಗಾಗಿ ಪ್ರತಿವರ್ಷವೂ ಈ ಪಕ್ಷಿಯು ವಲಸೆ ಹೋಗುತ್ತದೆ.ಪ್ರಧಾನಿ ಮೋದಿಯವರು ಅಮೆರಿಕದಲ್ಲಿ ಕ್ವಾಡ್ ನಾಯಕರ ಸಭೆ ಹಾಗೂ ವಿಶ್ವಸಂಸ್ತೆಯ ಶೃಂಗಸಭೆಯಲ್ಲಿ ಭಾಗವಹಿಸಿದ ಬಳಿಕ ಭಾರತಕ್ಕೆ ವಾಪಸಾದ ಸಂದರ್ಭದಲ್ಲಿಯೇ ಡೆರೆಕ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಶ್ಚಿಮಬಂಗಾಳದಂತಹ ರಾಜ್ಯಗಳಿಗೆ ಇನ್ನೂ ಕೂಡಾ ಕೇಂದ್ರದಿಂದ ನಿಧಿಗಳು ಮಂಜೂರಾಗಿಲ್ಲವೆಂದವರು ಬ್ರಿಯಾನ್ ಎಕ್ಸ್‌ನಲ್ಲಿ ಪ್ರಕಟಿಸಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಕೇಂದ್ರ ಸರಕಾರದ ನಿರ್ದೇಶನಳನ್ನು ಅನುಸರಿಸದೆ ಇರುವುದರಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂನರೇಗಾ)ಯಡಿಯ ನಿಧಿಗಳನ್ನು ಬಿಡುಗಡೆಗೊಳಿಸುವುದನ್ನು ಸ್ಥಗಿತಗೊಳಿಸಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News