ಹೆಣ್ಣು ಭ್ರೂಣ | ಮನೆಯಲ್ಲಿ ಗರ್ಭಪಾತ ಮಾಡಿಸಿದ ಪತಿ ; ಪತ್ನಿ ಸಾವು

Update: 2024-09-25 15:56 GMT

ಸಾಂದರ್ಭಿಕ ಚಿತ್ರ  

ಹೊಸದಿಲ್ಲಿ : ಹೆಣ್ಣು ಮಗು ಎಂದು ತಿಳಿದ ಬಳಿಕ ವ್ಯಕ್ತಿಯೋರ್ವ ವೈದ್ಯರನ್ನು ಮನೆಗೆ ಕರೆಸಿ ಗರ್ಭಪಾತ ಮಾಡಿಸಲು ಪ್ರಯತ್ನಿಸಿದ ಸಂದರ್ಭ 24 ವರ್ಷದ ಆತನ ಪತ್ನಿ ಮೃತಪಟ್ಟ ಘಟನೆ ಪುಣೆ ಜಿಲ್ಲೆಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿ ಮಹಿಳೆಯ ಪತಿ ಹಾಗೂ ಆತನ ತಂದೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಪುಣೆ ಜಿಲ್ಲೆಯ ಇಂದಾಪುರ ತೆಹ್ಸಿಲ್‌ನ ಗ್ರಾಮದಲ್ಲಿ ಈ ಘಟನೆ ಸೋಮವಾರ ನಡೆದಿದೆ. ನಾಲ್ಕು ತಿಂಗಳ ಭ್ರೂಣವನ್ನು ಹತ್ಯೆ ಮಾಡಲಾಗಿದ್ದು, ಅದನ್ನು ತೋಟದಲ್ಲಿ ಹೂತು ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.

ಮೃತ ಮಹಿಳೆ 2017ರಲ್ಲಿ ಆರೋಪಿಯನ್ನು ವಿವಾಹವಾಗಿದ್ದರು. ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. 2021ರಲ್ಲಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಅನಂತರ ಮಹಿಳೆ 3ನೇ ಮಗುವಿನ ಗರ್ಭಿಣಿಯಾಗಿದ್ದಳು.

ಮೂರನೇ ಮಗುವಿನ ಗರ್ಭಿಣಿಯಾದಾಗ ಆಕೆಯ ಕುಟುಂಬ ಭ್ರೂಣ ಲಿಂಗ ಪತ್ತೆ ಪರೀಕ್ಷೆ ನಡೆಸಿತ್ತು. ಈ ಸಂದರ್ಭ ಹೆಣ್ಣು ಮಗು ಎಂಬುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಮಹಿಳೆಯ ಗರ್ಭಪಾತ ನಡೆಸಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಗೆ ಮನೆಯಲ್ಲಿ ಗರ್ಭಪಾತ ನಡೆಸಲು ಪತಿ ಹಾಗೂ ಆತನ ಕುಟುಂಬದವರು ವೈದ್ಯರ ಮೇಲೆ ಒತ್ತಡ ಹೇರಿದ್ದಾರೆ. ಗರ್ಭಪಾತದ ಸಂದರ್ಭ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News