ಪ್ರತಿಕೂಲ ಹವಾಮಾನ: ದಿಲ್ಲಿಯ 18 ವಿಮಾನಗಳ ಮಾರ್ಗ ಬದಲು

Update: 2023-12-02 15:41 GMT

ಸಾಂದರ್ಭಿಕ ಚಿತ್ರ | Photo: PTI 

ಚೆನ್ನೈ: ಕಡಿಮೆ ದೃಗ್ಗೋಚರ ಹಾಗೂ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ದಿಲ್ಲಿಯ ಇಂದಿರಾ ಗಾಂಧಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ 18 ವಿಮಾನಗಳ ಮಾರ್ಗವನ್ನು ಶನಿವಾರ ಬದಲಾಯಿಸಲಾಗಿದೆ ಹಾಗೂ ಇತರ ಹಲವು ವಿಮಾನಗಳು ವಿಳಂಬವಾಗಿ ಸಂಚರಿಸಿವೆ.

ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ 10 ಗಂಟೆ ವರೆಗೆ 18 ವಿಮಾನಗಳನ್ನು ಜೈಪುರ, ಲಕ್ನೊ, ಅಹ್ಮದಾಬಾದ್ ಹಾಗೂ ಅಮೃತಸರ ಸೇರಿದಂತೆ ಇತರ ನಗರಗಳಿಗೆ ಮಾರ್ಗ ಬದಲಾಯಿಸಲಾಗಿದೆ ಎಂದು ಇಂದಿರಾ ಗಾಂಧಿ ಇಂಟರ್ನ್ಯಾಶನಲ್ (ಐಜಿಐ) ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ದಿಲ್ಲಿಯ ಹಲವು ಪ್ರದೇಶಗಳಲ್ಲಿ ಶನಿವಾರ ವಾಯು ಗುಣಮಟ್ಟ ‘ಅತಿ ಕಳಪೆ’ ವರ್ಗದಲ್ಲಿ ದಾಖಲಾಗಿರುವುದರಿಂದ, ಇದಕ್ಕೆ ಅನುಗುಣವಾಗಿ ದಿಲ್ಲಿಯ ಹಲವು ಭಾಗಗಳಲ್ಲಿ ಶನಿವಾರ ದೃಗ್ಗೋಚರತೆ ತೀರಾ ಕಡಿಮೆ ಇತ್ತು. ನಗರದ ಹಲವು ಪ್ರದೇಶಗಳು ಮಂಜಿನಿಂದ ಆವರಿಸಿತ್ತು.

ಆದರೂ, ವಿಮಾನ ಯಾನ ಸಂಸ್ಥೆಗಳು ವಿಮಾನಗಳ ಸಂಚಾರ ಸಮಯದ ಪರಿಷ್ಕರಣೆಯನ್ನು ತನ್ನ ಸಾಮಾಜಿಕ ಜಾಲತಾಣದ ಹ್ಯಾಂಡಲ್ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ವಿಮಾನ ಸಂಚಾರ ವಿಳಂಬ ಹಾಗೂ ಮಾರ್ಗ ಬದಲಾವಣೆಯಿಂದ ಉಂಟಾಗುವ ಯಾವುದೇ ಅನಾನುಕೂಲತೆಗೆ ವಿಮಾನ ಯಾನ ಸಂಸ್ಥೆಯನ್ನು ಸಂಪರ್ಕಿಸುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News