ಟ್ರಾಯ್ ನೂತನ ನಿಯಮಾವಳಿ: ಒಟಿಪಿ ಸಂದೇಶಗಳ ಮಾಹಿತಿಗೆ ಟೆಲಿಕಾಂ ಕಂಪೆನಿಗಳಿಗೆ ಗಡುವು
ಹೊಸದಿಲ್ಲಿ: ಒಟಿಪಿಗಳ (ಒನ್-ಟೈಮ್ ಪಾಸ್‌ವರ್ಡ್‌ಗಳು) ಮೂಲಕ ನಡೆಯುತ್ತಿರುವ ಸೈಬರ್ ವಂಚನೆಗಳನ್ನು ತಡೆಗಟ್ಟುವ ಸಲುವಾಗಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಹೊಸ ನಿಯಮಗಳನ್ನು ಜಾರಿಗೆ ತರಲು ಹೊರಟಿದೆ.
ಈ ಬಗ್ಗೆ ಒಪ್ಪಿಗೆ ಸೂಚಿಸಲು ಟೆಲಿಕಾಂ ಕಂಪೆನಿಗಳಿಗೆ ಡಿಸೆಂಬರ್ 1, 2024 ರವರೆಗೆ TRAI ಅಂತಿಮ ವಿಸ್ತರಣೆಯನ್ನು ನೀಡಲಾಗಿದೆ.
ಆನ್‌ಲೈನ್ ವ್ಯವಹಾರಗಳಿಗೆ ಒಟಿಪಿ ಅವಶ್ಯಕವಾಗಿದ್ದು, ಟ್ರಾಯ್ ನೀಡಿರುವ ಗಡುವಿನೊಳಗೆ ಟೆಲಿಕಾಂ ಕಂಪೆನಿಗಳು ಒಟಿಪಿ ಮೂಲಗಳನ್ನು ಪತ್ತೆಗೊಳಿಸುವ ಮಾಹಿತಿಯನ್ನು ನೀಡಲು ಒಪ್ಪದಿದ್ದರೆ, ಆನ್‌ಲೈನ್ ವ್ಯವಹಾರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಬಹುದು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
TRAI ನ ಹೊಸ ನಿಯಮಗಳು ಸ್ಪ್ಯಾಮ್ ಮತ್ತು ಫಿಶಿಂಗ್ ಸಂದೇಶಗಳನ್ನು ನಿಗ್ರಹಿಸುವ ಗುರಿಯನ್ನು ಹೊಂದಿದ್ದು, ಟೆಲಿಕಾಂ ಆಪರೇಟರ್‌ಗಳು OTP ಗಳು ಸೇರಿದಂತೆ ವಾಣಿಜ್ಯ ಸಂದೇಶಗಳ ಮೂಲವನ್ನು ಪತ್ತೆಹಚ್ಚುವ ಅಗತ್ಯವಿದೆ. ಈ ಕ್ರಮವು ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಮೋಸದ ಚಟುವಟಿಕೆಗಳಿಂದ ಗ್ರಾಹಕರನ್ನು ರಕ್ಷಿಸಲು ಉದ್ದೇಶಿಸಲಾಗಿದೆ ಎಂದು ಟ್ರಾಯ್ ಹೇಳಿದೆ.