210 ಕೋಟಿ ರೂ. ಪಾವತಿಸುವಂತೆ ವಿದ್ಯುತ್ ಬಿಲ್ ಸ್ವೀಕರಿಸಿದ ವ್ಯಕ್ತಿ!

Update: 2025-01-10 05:27 GMT

ಸಾಂಧರ್ಬಿಕ ಚಿತ್ರ | NDTV

ಶಿಮ್ಲಾ: ಹಿಮಾಚಲ ಪ್ರದೇಶದ ಹಮೀರ್ಪುರ ಜಿಲ್ಲೆಯ ವ್ಯಕ್ತಿಯೋರ್ವರು ಸುಮಾರು 210 ಕೋಟಿ ರೂ. ವಿದ್ಯುತ್ ಬಿಲ್ ಬಂದಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ.

ಹಿಮಾಚಲದ ಬೆಹೆರ್ವಿನ್ ಜತ್ತನ್ ಗ್ರಾಮದ ಉದ್ಯಮಿ ಲಲಿತ್ ಧಿಮಾನ್ ಅವರಿಗೆ 2,10,42,08,405 ರೂ. ಪಾವತಿಸುವಂತೆ ವಿದ್ಯುತ್ ಬಿಲ್ ಬಂದಿದೆ. ಆದರೆ, ದೂರಿನ ನಂತರ ಎಚ್ಚೆತ್ತುಕೊಂಡ ವಿದ್ಯುತ್ ಇಲಾಖೆ ಬಿಲ್ ಸರಿಪಡಿಸಿ ಪರಿಷ್ಕೃತ ವಿದ್ಯುತ್‌ ಬಿಲ್‌ ನ್ನು ನೀಡಿದೆ.

ಧಿಮಾನ್ ತಿಂಗಳ ಹಿಂದೆಯಷ್ಟೇ 2,500 ರೂ. ವಿದ್ಯುತ್ ಬಿಲ್ ಪಾವತಿಸಿದ್ದರು. ಆದರೆ, ಡಿಸೆಂಬರ್ ತಿಂಗಳ ವಿದ್ಯುತ್ ಬಿಲ್ ನೋಡಿ ಅವರು ಅಚ್ಚರಿಪಟ್ಟಿದ್ದಾರೆ. ದುಬಾರಿ ವಿದ್ಯುತ್ ಬಿಲ್ ಬಂದಿರುವ ಬಗ್ಗೆ ಅವರು ವಿದ್ಯುತ್ ಮಂಡಳಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿದ ಅಧಿಕಾರಿಗಳು ತಾಂತ್ರಿಕ ದೋಷದಿಂದ ಹೆಚ್ಚಿನ ವಿದ್ಯುತ್ ಬಿಲ್ ಬಂದಿದೆ ಎಂದು ತಿಳಿಸಿದ್ದಾರೆ. ನಂತರ ಅವರ ಬಿಲ್ ಅನ್ನು 4,047 ರೂ.ಗೆ ಇಳಿಸಲಾಗಿದೆ ಎಂದು ವರದಿಯಾಗಿದೆ.

ಕಳೆದ ವರ್ಷ, ಗುಜರಾತ್‌ ನ ವಲ್ಸಾದ್ ನ ಟೈಲರ್ ಅನ್ಸಾರಿ 86 ಲಕ್ಷ ರೂ. ವಿದ್ಯುತ್ ಬಿಲ್ ಪಡೆದಿರುವುದು ಸುದ್ದಿಯಾಗಿತ್ತು. ಇದೀಗ, ಮತ್ತೆ ಅಂತಹದ್ದೇ ಪ್ರಕರಣವೊಂದು ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News