ಶ್ರೀನಗರದ ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ನಮಾಝ್ಗೆ ನಿಷೇಧ

Update: 2023-11-18 14:18 GMT

ಜಾಮಿಯಾ ಮಸೀದಿ | Photo: PTI 

ಶ್ರೀನಗರ: ಗಾಝಾದಲ್ಲಿಯ ಪರಿಸ್ಥಿತಿಯನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯಬಹುದು ಎಂಬ ಆತಂಕದಿಂದಾಗಿ ಜಮ್ಮು-ಕಾಶ್ಮೀರ ಆಡಳಿತವು ಶ್ರೀನಗರದಲ್ಲಿಯ ಐತಿಹಾಸಿಕ ಜಾಮಿಯಾ ಮಸೀದಿಯಲ್ಲಿ ಸತತ ಆರು ಶುಕ್ರವಾರ ಸಾಮೂಹಿಕ ಪ್ರಾರ್ಥನೆಗಳನ್ನು ನಿಷೇಧಿಸಿದೆ. ಮಸೀದಿಯ ಮುಖ್ಯ ಧರ್ಮಗುರು ಮಿರ್ವೈಜ್ ಉಮರ್ ಫಾರೂಕ್ ಅವರನ್ನು ಗೃಹಬಂಧನದಲ್ಲಿಡಲಾಗಿದೆ.

ಜಾಮಿಯಾ ಮಸೀದಿಯನ್ನು ಗುರಿಯಾಗಿಟ್ಟುಕೊಳ್ಳಲಾಗಿದೆ ಮತ್ತು ಗಾಝಾದಲ್ಲಿಯ ಸಂಘರ್ಷ ಅನುಕೂಲಕರ ನೆಪವಾಗಿದೆ ಎಂದು ಮಸೀದಿಯ ಆಡಳಿತವನ್ನು ನೋಡಿಕೊಳ್ಳುತ್ತಿರುವ ಅಂಜುಮಾನ್ ಔಕಾಫ್ ನ ವಕ್ತಾರರು ಹೇಳಿದರು.ಇಸ್ರೇಲ್ ಫೆಲೆಸ್ತೀನಿಗಳ ವಿರುದ್ಧ ಯುದ್ಧವನ್ನು ಆರಂಭಿಸಿದಾಗಿನಿಂದ ಅಲ್-ಅಕ್ಸಾ ಮಸೀದಿಯಲ್ಲಿ ಪ್ರಾರ್ಥನೆಗಳನ್ನು ನಿಷೇಧಿಸಿದ್ದಾರೆ. ಇಲ್ಲಿ ಜಾಮಿಯಾ ಮಸೀದಿಗೆ ಬೀಗ ಜಡಿದಿರುವುದು ಪ್ರದೇಶದಲ್ಲಿ ಸಹಜ ಸ್ಥಿತಿ ಮರಳಿದೆ ಎಂಬ ಆಡಳಿತದ ಹೇಳಿಕೆಗಳ ಪೊಳ್ಳುತನವನ್ನು ಬಯಲಿಗೆಳೆದಿದೆ. ಜಾಮೀಯಾ ಮಸೀದಿಯಲ್ಲಿ ಶುಕ್ರವಾರದ ನಮಾಝ್ ಗಳಿಗೆ ನಿಷೇಧ ಮತ್ತು ಮಿರ್ವೈಜ್ ಅವರಿಗೆ ಅನುಚಿತ ನಿರ್ಬಂಧ ವಿಧಿಸಿರುವುದು ಕಾಶ್ಮೀರದ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದೆ ಎಂದರು.

ಅಧಿಕಾರಿಗಳು ತಮ್ಮ ನಿರ್ಧಾರವನ್ನು ಪರಿಷ್ಕರಿಸಬೇಕು. ಮಸೀದಿಯಲ್ಲಿ ಪ್ರಾರ್ಥನೆಗಳಿಗೆ ಮತ್ತು ಕಾಶ್ಮೀರದ ಮಿರ್ವೈಜ್ ಆಗಿ ಫಾರೂಕ್ ಅವರು ತನ್ನ ಧಾರ್ಮಿಕ ಕರ್ತವ್ಯವನ್ನು ನಿರ್ವಹಿಸಲು ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News