ಬಿಲ್ಕಿಸ್ ಬಾನು ಪ್ರಕರಣ | ಅಪರಾಧಿ ಚಂದಾನನಿಗೆ 10 ದಿನಗಳ ಪರೋಲ್

Update: 2024-02-24 16:47 GMT

ಬಿಲ್ಕಿಸ್ ಬಾನು | Photo: PTI 

ಅಹ್ಮದಾಬಾದ್: 2002ರ ಬಿಲ್ಕಿಸ್ ಬಾನು ಸಾಮಾಹಿಕ ಅತ್ಯಾಚಾರ ಪ್ರಕರಣದ ಅಪರಾಧಿ ರಮೇಶ್ ಚಂದನಾನಿಗೆ ಆತನ ಸೋದರಿಯ ಪುತ್ರನ ವಿವಾಹದಲ್ಲಿ ಪಾಲ್ಗೊಳ್ಳಲು 10 ದಿನಗಳ ಪರೋಲ್ ಅನ್ನು ಗುಜರಾತ್ ಹೈಕೋರ್ಟ್ ಶುಕ್ರವಾರ ನೀಡಿದೆ.

ಪಂಚಮಾಲ್ ಜಿಲ್ಲೆಯ ನಿವಾಸಿಯಾದ ರಮೇಶ್ ಚಂದನಾ, ಬಿಲ್ಕಿಸ್ ಬಾನೊ ಅತ್ಯಾಚಾರ ಹಾಗೂ ಆಕೆಯ ಕುಟುಂಬ 7 ಮಂದಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಇತರ 10 ಮಂದಿ ಅಪರಾಧಿಗಳ ಜೊತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

5 ಸಾವಿರ ರೂ.ಗಳ ಬಾಂಡ್ ಅನ್ನು ಪಾವತಿಸಬೇಕೆಂಬ ಶರತ್ತಿನೊಂದಿಗೆ ನ್ಯಾಯಮೂರ್ತಿ ಡಿ.ಎ. ಜೋಷಿ ಅವರು ಚಂದಾನನಿಗೆ 10 ದಿನಗಳ ಪರೋಲ್ ನೀಡಲು ಆದೇಶಿಸಿದರು.

ಸೂರತ್ ನಲ್ಲಿ ನಡೆಯಲಿರುವ ತನ್ನ ಸೋದರಿಯ ಪುತ್ರನ ವಿವಾಹ ಪಾಲ್ಗೊಳ್ಳಲು ತನಗೆ ತಾತ್ಕಾಲಿಕವಾಗಿ ಪರೋಲ್ ನೀಡುವಂತೆ ಚಂದನಾ ಮನವಿ ಮಾಡಿದ್ದನು. ಇದಕ್ಕೂ ಮೊದಲು ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ ಇನ್ನೋರ್ವ ಆರೋಪಿ ಪ್ರದೀಪ್ ಮೋದಿಯಾನಿಗೆ ಆತನ ಮಾವನ ನಿಧದ ಹಿನ್ನೆಲೆಯಲ್ಲಿ ಗುಜರಾತ್ ಹೈಕೋರ್ಟ್ ಪರೋಲ್ ನೀಡಿತ್ತು.

ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ 10 ಮಂದಿ ಅಪರಾಧಿಗಳನ್ನು ಅವಧಿಗೆ ಮುಂಚಿತವಾಗಿ ಬಿಡುಗಡೆಗೊಳಿಸಿದ ಗುಜರಾತ್ ಸರಕಾರದ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ಆನಂತರ ಇವರೆಲ್ಲರನ್ನೂ ಗೋಧ್ರಾದ ಸಬ್ ಜೈಲಿನಲ್ಲಿರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News