ಬಿಜೆಪಿಯು ಮಹಿಳೆಯರನ್ನು ಎರಡನೇ ದರ್ಜೆ ನಾಗರಿಕರಂತೆ ನಡೆಸಿಕೊಳ್ಳಬೇಕು ಎಂದು ನಂಬಿದೆ : ರಾಹುಲ್ ಗಾಂಧಿ

Update: 2024-05-23 16:54 GMT

ರಾಹುಲ್ ಗಾಂಧಿ | Photo Credit: X/ @INCIndia

ಹೊಸ ದಿಲ್ಲಿ: ಬಿಜೆಪಿಯು ಮಹಿಳೆಯರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನಡೆಸಿಕೊಳ್ಳಬೇಕು ಎಂದು ನಂಬಿದೆ ಎಂದು ಗುರುವಾರ ಆರೋಪಿಸಿರುವ ರಾಹುಲ್ ಗಾಂಧಿ, ಬಿಜೆಪಿಯ ಸೈದ್ಧಾಂತಿಕ ಮಾತೃ ಸಂಸ್ಥೆಯಾದ ಆರೆಸ್ಸೆಸ್ ತನ್ನ ಶಾಖೆಗಳನ್ನು ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡುವುದಿಲ್ಲ ಎಂದೂ ದೂರಿದರು.

ವಾಯುವ್ಯ ದಿಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉದಿತ್ ರಾಜ್ ಪರವಾಗಿ ಮಂಗೋಲ್‌ಪುರಿಯಲ್ಲಿ ಆಯೋಜಿಸಲಾಗಿದ್ದ ಅಖಿಲ ಮಹಿಳಾ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರಿ ಪ್ರಚಾರದೊಂದಿಗೆ ಬಿಜೆಪಿಯು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿತ್ತಾದರೂ, ಈ ಕಾಯ್ದೆಯನ್ನು 10 ವರ್ಷಗಳ ನಂತರ ಜಾರಿಗೊಳಿಸಲಾಗುವುದು ಎಂದು ಹೇಳಿತು ಎಂಬುದರತ್ತ ಬೊಟ್ಟು ಮಾಡಿದರು.

ಮೇ 25ರಂದು ನಡೆಯಲಿರುವ ಆರನೆ ಹಂತದ ಲೋಕಸಭಾ ಚುನಾವಣೆಯ ಕೊನೆಯ ದಿನವಾದ ಗುರುವಾ ಪ್ರಚಾರ ಕಾರ್ಯ ಮುಕ್ತಾಯಗೊಂಡ ನಂತರ, ಜನಸಾಮಾನ್ಯರೊಂದಿಗೆ ಸಂವಾದ ನಡೆಸಲು ರಾಹುಲ್ ಗಾಂಧಿ ಮೆಟ್ರೊ ಪ್ರಯಾಣವನ್ನೂ ಕೈಗೊಂಡರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News