ಪಟಾಕಿ ಸಿಡಿಸುವಂತೆ ಬಿಜೆಪಿಯ ನಾಯಕರು ಜನರನ್ನು ಹುರಿದುಂಬಿಸಿದ್ದಾರೆ: ದಿಲ್ಲಿ ಸಚಿವರ ಆರೋಪ

Update: 2023-11-13 08:20 GMT

Photo: PTI

ಹೊಸ ದಿಲ್ಲಿ: ದೀಪಾವಳಿಯ ಮರುದಿನ ದಿಲ್ಲಿಯ ವಾಯು ಗುಣಮಟ್ಟ ಮತ್ತೆ ಕಳಪೆ ಸ್ಥಿತಿಗೆ ಕುಸಿದಿದ್ದು, ರಾಷ್ಟ್ರ ರಾಜಧಾನಿಯಲ್ಲಿ ತುರ್ತು ವಾಯು ಪರಿಸ್ಥಿತಿ ಇದ್ದರೂ ಬಿಜೆಪಿ ನಾಯಕರು ಜನರಿಗೆ ಪಟಾಕಿ ಸಿಡಿಸುವಂತೆ ಹುರಿದುಂಬಿಸಿದ್ದಾರೆ ಎಂದು ದಿಲ್ಲಿ ಪರಿಸರ ಸಚಿವ ಗೋಪಾಲ್ ರಾಯ್ ಆರೋಪಿಸಿದ್ದಾರೆ.

ಕಳೆದ ಮೂರು ದಿನಗಳಿಂದ ವಾಯು ಗುಣಮಟ್ಟ ಸೂಚ್ಯಂಕವು 215ರ ಆಸುಪಾಸಿನಲ್ಲಿತ್ತಾದರೂ, ಪಟಾಕಿಗಳನ್ನು ಸಿಡಿಸಿರುವುದರಿಂದ ಇಂದು ಬೆಳಗ್ಗೆ ವಾಯು ಮಾಲಿನ್ಯ ಪ್ರಮಾಣವು ತೀವ್ರ ಏರಿಕೆ ಕಂಡಿದೆ ಎಂದು ಅವರು ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.

“ಹಲವಾರು ಮಂದಿ ಪಟಾಕಿಗಳನ್ನು ಸಿಡಿಸದಿದ್ದರೂ, ಕೆಲವು ಪ್ರದೇಶಗಳಲ್ಲಿ ನಿಗದಿತ ಗುರಿ ಹೊಂದಿರುವ ಪ್ರಮಾಣದ ಪಟಾಕಿಗಳನ್ನು ಸಿಡಿಸಲಾಗಿದೆ. ವಾಯು ಗುಣಮಟ್ಟವು ಕುಂಠಿತಗೊಳ್ಳಬಾರದು ಎಂಬ ಭಾವನೆ ದಿಲ್ಲಿ ಜನರಲ್ಲಿತ್ತು. ಆದರೆ, ಬಿಜೆಪಿಯು ಪಟಾಕಿ ಸಿಡಿಸುವಂತೆ ಜನರನ್ನು ಹುರಿದುಂಬಿಸಿದ್ದರಿಂದ ದಿಲ್ಲಿ ಅದಕ್ಕೆ ಬೆಲೆ ತೆರುತ್ತಿದೆ. ಒಂದು ವೇಳೆ ಪಟಾಕಿಗಳನ್ನು ಸಿಡಿಸದೆ ಇದ್ದಿದ್ದರೆ ಗಾಳಿಯಿಂದು ಶುದ್ಧವಾಗಿರುತ್ತಿತ್ತು” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ಸಂಜೆ ರಾಷ್ಟ್ರ ರಾಜಧಾನಿ ಪ್ರದೇಶದುದ್ದಕ್ಕೂ ಪಟಾಕಿಯ ಸದ್ದು ಭೋರ್ಗರೆದಿದ್ದರಿಂದ ದಿಲ್ಲಿಯ ವಾಯು ಮಾಲಿನ್ಯ ಮಟ್ಟವು ಭಾರಿ ಏರಿಕೆಯಾಗಿರುವುದು ವಾಯು ಗುಣಮಟ್ಟ ನಿಗಾ ಸಾಧನಗಳ ನೈಜ ಸಮಯದ ಪ್ರವೃತ್ತಿಯಲ್ಲಿ ವ್ಯಕ್ತವಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ದಾಖಲಾಗಿರುವ ದತ್ತಾಂಶಗಳ ಪ್ರಕಾರ, ಪಿಎಂ2.5 ಮತ್ತು ಪಿಎಂ10 ಮಾಲಿನ್ಯಕಾರಕ ಕಣಗಳ ಪ್ರಮಾಣವು ಇಂದು ಬೆಳಗ್ಗೆ ತೀವ್ರ ಸ್ವರೂಪದಲ್ಲಿ ಏರಿಕೆಯಾಗಿದೆ. ಇಂದು ಬೆಳಗ್ಗೆ ದಿಲ್ಲಿಯ ವಾಯು ಮಾಲಿನ್ಯ ಸೂಚ್ಯಂಕ ಪ್ರಮಾಣವು ಸುಮಾರು 300ರ ಆಸುಪಾಸಿನಲ್ಲಿದ್ದು, ‘ತೀರಾ ಕಳಪೆ’ ಗುಣಮಟ್ಟವನ್ನು ಪ್ರತಿನಿಧಿಸುತ್ತಿದೆ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News