ಪ್ರಮಾಣವಚನ ಸ್ವೀಕಾರದ ವೇಳೆ ಜೈ ಹಿಂದೂ ರಾಷ್ಟ್ರ ಎಂದ ಬರೇಲಿಯ ಬಿಜೆಪಿ ಸಂಸದ

Update: 2024-06-25 16:34 IST
ಪ್ರಮಾಣವಚನ ಸ್ವೀಕಾರದ ವೇಳೆ ಜೈ ಹಿಂದೂ ರಾಷ್ಟ್ರ ಎಂದ ಬರೇಲಿಯ ಬಿಜೆಪಿ ಸಂಸದ

ಛತ್ರಪಾಲ್ ಸಿಂಗ್ | PC : X 

  • whatsapp icon

ಹೊಸದಿಲ್ಲಿ : ಲೋಕಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ಉತ್ತರ ಪ್ರದೇಶದ ಬರೇಲಿ ಕ್ಷೇತ್ರದ ಬಿಜೆಪಿ ಸಂಸದ ಛತ್ರಪಾಲ್ ಸಿಂಗ್ ಗಂಗ್ವಾರ್ ಜೈ ಹಿಂದೂರಾಷ್ಟ್ರ ಎಂದು ಹೇಳಿ ವಿಪಕ್ಷಗಳಿಂದ ಟೀಕೆಗೆ ಗುರಿಯಾದರು.

ಛತ್ರಪಾಲ್ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇದು ಸಂವಿಧಾನ ವಿರೋಧಿ ನಡೆ, ಅವರ ಪದಗಳನ್ನು ತೆಗೆದು ಹಾಕಿ ಎಂದು ವಿಪಕ್ಷಗಳ ಸದಸ್ಯರು ಘೋಷಣೆ ಕೂಗಿದರು. ಈ ವೇಳೆ ಸ್ಪೀಕರ್ ಪೀಠದಲ್ಲಿ ಫಗ್ಗನ್ ಸಿಂಗ್ ಕುಲಸ್ತೇ ಅವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News