ಶಿವಸೇನೆ (ಯುಬಿಟಿ) ಸೇರಿದ ಬಿಜೆಪಿ ಸಂಸದ ಉನ್ಮೇಶ್ ಪಾಟೀಲ್

Update: 2024-04-03 15:24 GMT

ಉದ್ದವ್ ಠಾಕ್ರೆ , ಉನ್ಮೇಶ್ ಪಾಟೀಲ್ | Photo: PTI  

ಮುಂಬೈ : ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಪಡೆಯಲು ವಿಫಲವಾಗಿರುವ ಉತ್ತರ ಮಹಾರಾಷ್ಟ್ರದ ಜಲಗಾಂವ್ ನ ಬಿಜೆಪಿ ಸಂಸದ ಉನ್ಮೇಶ್ ಪಾಟೀಲ್ ಬುಧವಾರ ಪ್ರತಿಪಕ್ಷವಾದ ಶಿವಸೇನೆ (ಯುಬಿಟಿ) ಸೇರಿದ್ದಾರೆ.

ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರ ಉಪನಗರ ಮುಂಬೈಯಲ್ಲಿರುವ ನಿವಾಸ ‘ಮಾತೋಶ್ರೀ’ಯಲ್ಲಿ ಪಾಟೀಲ್ ಅವರು ಬೆಂಬಲಿಗರೊಂದಿಗೆ ಶಿವಸೇನೆ (ಯುಬಿಟಿ) ಸೇರಿದರು.

ಪಾಟೀಲ್ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಜಲಗಾಂವ್ ಹಾಗೂ ಉತ್ತರ ಮಹಾರಾಷ್ಟ್ರದಲ್ಲಿ ನಿರೀಕ್ಷೆ ಹೆಚ್ಚಿದೆ. ಅಲ್ಲದೆ, ಇದು ಸುಲಭ ಜಯಕ್ಕೆ ದಾರಿ ಮಾಡಿಕೊಡಲಿದೆ ಎಂದು ಶಿವಸೇನೆ (ಯುಬಿಟಿ)ಯ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಜಲಗಾಂವ್ ಲೋಕಸಭಾ ಕ್ಷೇತ್ರದಲ್ಲಿ ಉನ್ಮೇಶ್ ಪಾಟೀಲ್ ಗೆ ಬದಲಾಗಿ ಸ್ಮಿತಾ ವಾಗ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.



Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News