ಭೀಕರ ಭೂಕುಸಿತ ಘಟನೆ ಮಾಸುವ ಮುನ್ನವೇ ವಯನಾಡ್-ಕೋಝಿಕ್ಕೋಡ್ ಸುರಂಗ ನಿರ್ಮಾಣಕ್ಕೆ ಮುಂದಾದ ಕೇರಳ ಸರ್ಕಾರ

Update: 2024-09-07 12:06 GMT

ಸಾಂದರ್ಭಿಕ ಚಿತ್ರ (Photo: PTI)

ತಿರುವನಂತಪುರ: ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ನೆನಪು ಜೀವಂತವಾಗಿರುವಾಗ ಮತ್ತು ರಾಜ್ಯ ಮಟ್ಟದ ತಜ್ಞರ ಮೌಲ್ಯಮಾಪನ ಸಮಿತಿಯ(ಎಸ್ಇಎಸಿ) ಗಂಭೀರ ಕಳವಳಗಳ ಹೊರತಾಗಿಯೂ ಕೇರಳ ಸರ್ಕಾರವು ವಯನಾಡು ಮತ್ತು ಕೋಝಿಕ್ಕೋಡು ನಡುವಿನ ಅವಳಿ ಸುರಂಗ ಯೋಜನೆಗೆ ಮುಂದಾಗಿದೆ.

ವಯನಾಡಿನ ಮೆಪ್ಪಾಡಿಯಿಂದ ಕೋಝಿಕ್ಕೋಡ್ ನ ಅನಕ್ಕಂಪೊಯಿಲ್ವರೆಗಿನ 8.7 ಕಿಲೋಮೀಟರ್ ಸುರಂಗ ರಸ್ತೆ ಯೋಜನೆಗೆ ಕೇರಳ ಸರಕಾರ ಟೆಂಡರ್ ಗಳನ್ನು ಕರೆದಿದ್ದು, ಭೋಪಾಲ್ ಮೂಲದ ದಿಲೀಪ್ ಬಿಲ್ಡ್ಕಾನ್ ಅತಿ ಕಡಿಮೆ ಎಂದರೆ ರೂ.1,341 ಕೋಟಿಗೆ ಬಿಡ್ಡಿಂಗ್ ಸಲ್ಲಿಸಿರುವುದು ಕಂಡುಬಂದಿದೆ.

ಕೋಝಿಕ್ಕೋಡ್ ನ ತಿರುವಂಬಾಡಿಯ ಸಿಪಿಎಂ ಶಾಸಕ ಲಿಂಟೊ ಜೋಸೆಫ್, ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಸುರಂಗ ನಿರ್ಮಾಣ ಕಾರ್ಯವು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಿಕೊಂಡಿದ್ದಾರೆ.

ಆದರೆ ಯೋಜನೆಗೆ ಪರಿಸರ ಕ್ಲಿಯರೆನ್ಸ್ ಸರ್ಟಿಪಿಕೇಟ್ ಇನ್ನು ಕೂಡ ಸಿಕ್ಕಿಲ್ಲ ಎನ್ನಲಾಗಿದೆ. ಈ ಪ್ರದೇಶದಲ್ಲಿ ಆಗಾಗ್ಗೆ ಭೂಕುಸಿತಗಳು ಸಂಭವಿಸುತ್ತಿದೆ. ಈ ಪ್ರದೇಶ ಭೂಕುಸಿತ ಪೀಡಿತ ವಲಯವಾಗಿದ್ದು, ಸುರಂಗ ಯೋಜನೆ ಬಗ್ಗೆ SEAC ಕಳವಳಗಳನ್ನು ವ್ಯಕ್ತಪಡಿಸಿದೆ.

ಯೋಜನಾ ಪ್ರದೇಶ ಭೂಕುಸಿತ ಪೀಡಿತ ಪ್ರದೇಶವಾಗಿದ್ದು, ವಿಶೇಷವಾಗಿ ಮುಂಗಾರು ಸಮಯದಲ್ಲಿ ಹೆಚ್ಚಾಗಿ ಭೂಕುಸಿತ ಸಂಭವಿಸುತ್ತಿದೆ. ಪುತ್ತುಮಲ ಗ್ರಾಮವು ಪ್ರಸ್ತಾವಿತ ಸುರಂಗ ರಸ್ತೆಯಿಂದ ಸರಿಸುಮಾರು 0.85 ಕಿಮೀ ದೂರದಲ್ಲಿದೆ, ಅಲ್ಲಿ 2019ರಲ್ಲಿ ಭಾರಿ ಭೂಕುಸಿತ ಸಂಭವಿಸಿದೆ.

ಸುರಂಗ ಯೋಜನಾ ಪ್ರದೇಶವು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಬರುತ್ತದೆ ಎಂದು SEAC ಹೇಳಿದೆ. ಪರಿಸರ ಅನುಮತಿಗಾಗಿ ಅರ್ಜಿಯನ್ನು ಪರಿಶೀಲಿಸಲು SEAC 28 ಹೆಚ್ಚುವರಿ ದಾಖಲೆಗಳನ್ನು ಸಹ ಕೋರಿತ್ತು. ಸರ್ಕಾರ ಈ ಬಗ್ಗೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವ ಪ್ರಕ್ರಿಯೆಯಲ್ಲಿದೆ ಮತ್ತು ಶೀಘ್ರದಲ್ಲೇ ಅಂತಿಮ ಅನುಮತಿಯನ್ನು ನಿರೀಕ್ಷಿಸಲಾಗಿದೆ ಎಂದು ಆಡಳಿತ ಪಕ್ಷದ ಶಾಸಕರು ಹೇಳಿದ್ದಾರೆ.

ವಯನಾಡಿನಲ್ಲಿ ಸಂಭವಿಸಿದ ಜು.30ರ ಭೂಕುಸಿತದ ಬಳಿಕವೂ ತಾಮರಸ್ಸೆರಿ ಘಾಟ್ ರಸ್ತೆಯಲ್ಲಿನ ಟ್ರಾಫಿಕ್ ದಟ್ಟಣೆಗೆ ಪರಿಹಾರವಾಗಿ ಯೋಜಿಸಲಾದ ಉದ್ದೇಶಿತ ಸುರಂಗ ರಸ್ತೆಯ ಬಗ್ಗೆ ಪರಿಸರವಾದಿಗಳು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುರಂಗ ರಸ್ತೆಗಳು ಎಲ್ಲಿಯೂ ಅನಾಹುತಗಳಿಗೆ ಕಾರಣವಾದ ಬಗ್ಗೆ ವರದಿಯಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಇದಲ್ಲದೆ ಪರಿಸರ ಅನುಮತಿ ಪಡೆಯುವ ಮುನ್ನವೇ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲಾಗಿದ್ದು, ಯೋಜನೆಗೆ ಸರ್ಕಾರದ ಆತುರವನ್ನು ಕೂಡ ತೋರಿಸುತ್ತದೆ ಎಂದು ವರದಿಯಾಗಿದೆ.

ಈ ಕುರಿತು ವಯನಾಡು ಪ್ರಕೃತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಎನ್ ಬಾದುಶಾ ಮಾತನಾಡಿ, ಇತ್ತೀಚಿನ ಭೂಕುಸಿತದ ನಂತರ ಸ್ಥಳೀಯ ಜನರಿಂದ ಸುರಂಗ ಯೋಜನೆಗೆ ಬಲವಾದ ಪ್ರತಿರೋಧವು ಉಲ್ಬಣಗೊಂಡಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸುರಂಗ ನಿರ್ಮಾಣ ಕಾರ್ಯ ಮುಂದುವರಿದರೆ ಗಂಭೀರವಾದ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಜು.30ರ ಭೂಕುಸಿತದ ನಂತರ, ತಾಮರಸ್ಸೆರಿ ಘಾಟ್ ರಸ್ತೆಯಲ್ಲಿನ ಟ್ರಾಫಿಕ್ ದಟ್ಟಣೆಗೆ ಪರಿಹಾರವಾಗಿ ಯೋಜಿಸಲಾದ ಉದ್ದೇಶಿತ ಸುರಂಗ ರಸ್ತೆಯ ಬಗ್ಗೆ ಪರಿಸರವಾದಿಗಳು ಗಂಭೀರ ಕಳವಳ ವ್ಯಕ್ತಪಡಿಸಿದ್ದರು. ಆಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸುರಂಗ ರಸ್ತೆಗಳು ಎಲ್ಲಿಯೂ ಅನಾಹುತಗಳಿಗೆ ಕಾರಣವಾದ ವರದಿಯಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಪರಿಸರ ಅನುಮತಿ ಪಡೆಯುವ ಮುನ್ನವೇ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳುತ್ತಿರುವುದೇ ಯೋಜನೆಗೆ ಸರ್ಕಾರದ ಅನಗತ್ಯ ಆತುರಕ್ಕೆ ಸ್ಪಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

ವಯನಾಡು ಪ್ರಕೃತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಎನ್ ಬಾದುಶಾ ಈ ಬಗ್ಗೆ ಮಾತನಾಡಿದ್ದು, ಇತ್ತೀಚಿನ ಭೂಕುಸಿತದ ನಂತರ ಸ್ಥಳೀಯ ಜನರಿಂದ ಯೋಜನೆಗೆ ಬಲವಾದ ವಿರೋಧ ವ್ಯಕ್ತವಾಗಿದೆ. ಆದ್ದರಿಂದ ಇಂತಹ ನಿರ್ಧಾರಗಳು ಮುಂದೆ ಭಾರೀ ಪ್ರತಿರೋಧಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಸರಕಾರ ನಿರ್ಮಾಣಕ್ಕೆ ಉದ್ದೇಶಿಸಿದ ಸುರಂಗ ಯೋಜನೆಯ ನಾಲ್ಕನೆಯ ಒಂದು ಭಾಗದಷ್ಟು ವೆಚ್ಚವನ್ನು ವಯನಾಡಿನಲ್ಲಿ ಸಧ್ಯ ಇರುವ ಘಾಟ್ ರಸ್ತೆಗಳ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಬಳಸಬಹುದಾಗಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News