ಭಾರತ್ ಜೋಡೊ ಯಾತ್ರೆಯು ನನಗೆ ಮೌನದ ಸೌಂದರ್ಯವನ್ನು ಕಲಿಸಿತು : ರಾಹುಲ್ ಗಾಂಧಿ

Update: 2024-09-07 17:28 GMT

ಜಮ್ಮುವಿನ ನಗ್ರೋಟಾದಲ್ಲಿ ಮಂಗಳವಾರ, ಜನವರಿ 24, 2023 ರಂದು   'ಭಾರತ್ ಜೋಡೋ ಯಾತ್ರೆ'ಯಲ್ಲಿ ರಾಹುಲ್ ಗಾಂಧಿ. PC : PTI

ಹೊಸದಿಲ್ಲಿ : '145 ದಿನಗಳ ಭಾರತ್ ಜೋಡೊ ಯಾತ್ರೆಯು ನನಗೆ ಮೌನದ ಸೌಂದರ್ಯವನ್ನು ಕಲಿಸಿತು. ಎರಡು ವರ್ಷಗಳಲ್ಲಿ ನಾನು ವಿವಿಧ ಹಿನ್ನೆಲೆಯ ಸಾವಿರಾರು ಮಂದಿ ಭಾರತೀಯರ ಮಾತುಗಳನ್ನು ಆಲಿಸಿದ್ದೇನೆ. ಪ್ರತಿಯೊಬ್ಬರ ಧ್ವನಿಯು ಹೊಸತನವನ್ನು ಹೊಂದಿತ್ತು. ಆ ಮಾತುಗಳು ಭಾರತ ಮಾತೆಯನ್ನು ಪ್ರತಿನಿಧಿಸಿತ್ತು' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆಗೆ ಎರಡನೇ ವರ್ಷಾಚರಣೆಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರಾಹುಲ್ ಗಾಂಧಿ ʼಜೋಡೋʼ ಯಾತ್ರೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 2022ರ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೊ ಯಾತ್ರೆಯು 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 3,570 ಕಿ.ಮೀ. ಅಧಿಕ ದೂರ ಸಂಚರಿಸಿತ್ತು. ಈ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ರಾಹುಲ್‌ ಕಿವಿಯಾಗಿದ್ದರು.

'ಭಾರತ ಮಾತೆಯ ಹಾಗೂ ಪ್ರೀತಿಯ ಧ್ವನಿಯನ್ನು ದೇಶದೆಲ್ಲೆಡೆ ಕೇಳಿಸುವಂತೆ ಮಾಡುವುದೇ ನಮ್ಮ ಗುರಿಯಾಗಿದೆ. ಭಾರತೀಯರು ಎಲ್ಲರನ್ನು ಪ್ರೀತಿಸುವ ಜನರು ಎಂದು ಭಾರತ್ ಜೋಡೋ ಯಾತ್ರೆಯು ಸಾಬೀತುಪಡಿಸಿತು. ನಾನು ಯಾತ್ರೆಯ ಆರಂಭದಲ್ಲಿ ದ್ವೇಷವನ್ನು ಮೆಟ್ಟಿ ನಿಂತು ಪ್ರೀತಿಯು ಜಯ ಗಳಿಸಲಿದೆ ಮತ್ತು ಭಯವನ್ನು ಸೋಲಿಸಲಿದೆ ಎಂದು ಹೇಳಿದ್ದೆ. ಇಂದಿಗೂ ನಮ್ಮ ಧ್ಯೇಯವು ಅದೇ ಆಗಿದೆ. ಭಾರತ ಮಾತೆಯ ಪ್ರೀತಿಯ ಧ್ವನಿ ದೇಶದೆಲ್ಲೆಡೆ ಕೇಳಿಸುವಂತೆ ಮಾಡುವುದೇ ನಮ್ಮ ಗುರಿಯಾಗಿದೆ' ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News