ಕೇಂದ್ರದಲ್ಲಿ ಬಿಜೆಪಿ ಕನಿಷ್ಠ 30 ವರ್ಷಗಳ ಕಾಲ ಅಧಿಕಾರದಲ್ಲಿರಲಿದೆ: ಅಮಿತ್ ಶಾ

Update: 2025-03-29 13:43 IST
Photo of Amit Shah

ಕೇಂದ್ರ ಗೃಹ ಸಚಿವ ಅಮಿತ್ ಶಾ (Photo: PTI)

  • whatsapp icon

ಹೊಸದಿಲ್ಲಿ: ಬಿಜೆಪಿಯು ತನ್ನ ಸ್ಥಿರ ಸಾಧನೆಯಿಂದಾಗಿ ಕೇಂದ್ರದಲ್ಲಿ ಕನಿಷ್ಠ 30 ವರ್ಷಗಳ ಕಾಲ ಅಧಿಕಾರದಲ್ಲಿರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ರಾತ್ರಿ ಆಯೋಜನೆಗೊಂಡಿದ್ದ 'Times Now Summit 2025'ನಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ, "ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷದ ಗೆಲುವು ಅದರ ನಿರಂತರ ಪರಿಶ್ರಮವನ್ನು ಆಧರಿಸಿರುತ್ತದೆ ಹಾಗೂ ನೀವು ನಿಮಗಾಗಿ ಜೀವಿಸದೆ, ದೇಶಕ್ಕಾಗಿ ಜೀವಿಸಿದಾಗ ಗೆಲುವು ನಿಮ್ಮದಾಗಿರುತ್ತದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

"ನಾನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷನಾಗಿದ್ದಾಗ, ಬಿಜೆಪಿಯು 30 ವರ್ಷ ಅಧಿಕಾರದಲ್ಲಿರಲಿದೆ ಎಂದು ಹೇಳಿದ್ದೆ. ಈ ಪೈಕಿ 10 ವರ್ಷ ಮಾತ್ರ ಮುಗಿದಿದೆ" ಎಂದೂ ಅವರು ಹೇಳಿದ್ದಾರೆ.

ಯಾವುದೇ ಪಕ್ಷ ಚೆನ್ನಾಗಿ ಕೆಲಸ ಮಾಡಿದಾಗ, ಸಾರ್ವಜನಿಕರ ವಿಶ್ವಾಸ ಗಳಿಸಿ, ಗೆಲ್ಲುವ ಆತ್ಮವಿಶ್ವಾಸ ಪಡೆಯುತ್ತದೆ. ಆದರೆ, ಯಾರು ಕೆಲಸ ಮಾಡುವುದಿಲ್ಲ, ಅಂಥವರಿಗೆ ಇಂತಹ ಆತ್ಮವಿಶ್ವಾಸ ಇರುವುದಿಲ್ಲ" ಎಂದು ಬಿಜೆಪಿಯ ಹಿರಿಯ ನಾಯಕರೂ ಆದ ಅಮಿತ್ ಶಾ ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News