ಭೂಮಿ ಲಭಿಸದ ಹಿನ್ನೆಲೆ; ಐತಿಹಾಸಿಕ ಕಾಶಿಪುರ ಕುದುರೆ ಮೇಳ ರದ್ದು

Update: 2025-04-01 08:15 IST
ಭೂಮಿ ಲಭಿಸದ ಹಿನ್ನೆಲೆ; ಐತಿಹಾಸಿಕ ಕಾಶಿಪುರ ಕುದುರೆ ಮೇಳ ರದ್ದು

ಸಾಂದರ್ಭಿಕ ಚಿತ್ರ PC: freepic

  • whatsapp icon

ರುದ್ರಾಪುರ: ಉಧಾಂಸಿಂಗ್ ನಗರದ ಕಾಶಿಪುರದಲ್ಲಿ ಶತಮಾನಗಳಿಂದ ನಡೆಯುತ್ತಿದ್ದ ಕುದುರೆ ಸಂತೆಯನ್ನು ಈ ಬಾರಿ ಭೂಮಿ ಲಭ್ಯತೆ ಇಲ್ಲ ಎಂಬ ಕಾರಣಕ್ಕಾಗಿ ರದ್ದುಪಡಿಸಲಾಗಿದೆ. ಕಳೆದ 170 ವರ್ಷಗಳಿಂದ ಪ್ರತಿ ವರ್ಷ ಚೈತ್ರಹಬ್ಬದ ನವರಾತ್ರಿಯ ವೇಳೆ ಈ 'ನಖಾಸಾ ಬಜಾರ್' ಕಾರ್ಯ ನಿರ್ವಹಿಸುತ್ತಿತ್ತು.

ಈ ಕುದುರೆ ಜಾತ್ರೆ ದೇಶದ ವಿವಿಧೆಡೆಗಳಿಂದ ಆಗಮಿಸುವ ಅತ್ಯಪೂರ್ವ ಕುದುರೆ ತಳಿಗಳಿಗೆ ಹೆಸರಾಗಿತ್ತು ಮತ್ತು ಇಡೀ ದೇಶದ ಕುದುರೆ ವ್ಯಾಪಾರಿಗಳನ್ನು ಆಕರ್ಷಿಸುತ್ತಿತ್ತು. ದಿಢೀರನೇ ಈ ಕುದುರೆ ಜಾತ್ರೆ ರದ್ದುಪಡಿಸಿರುವುದು ಒಂದು ಯುಗದ ಅಂತ್ಯ ಎಂದು ಸ್ಥಳೀಯರು ಬಣ್ಣಿಸಿದ್ದಾರೆ.

ಈ ಜಾತ್ರೆ ನಡೆಯುತ್ತಿದ್ದ ಎರಡು ಎಕರೆ ಭೂಮಿಯನ್ನು ಈ ಜಾತ್ರೆ ನಿರ್ವಹಿಸುತ್ತಿದ್ದ ಪಂಡಾ ಕುಟುಂಬಗಳಿಗೆ ವಿಭಜಿಸಿ ಕೊಡಲಾಗಿದ್ದು, ಸಂತೆ ನಡೆಸಲು ಈ ಭೂಮಿ ಲಭ್ಯವಿಲ್ಲ ಎಂದು ಅವರು ವ್ಯಾಪಾರಿಗಳಿಗೆ ತಿಳಿಸಿದ್ದಾರೆ.

ಉತ್ತರ ಪ್ರದೇಶದ ರಾಮಪುರದ ಪ್ರಖ್ಯಾತ ಕುದುರೆ ವ್ಯಾಪಾರಿ ಹುಸೇಣ್ ಬಕ್ಷ್ ಎಂಬುವವರಿಂದ 1855ರಲ್ಲಿ ಆರಂಭವಾದ ಈ ಕುದುರೆ ಜಾತ್ರೆ, ಅಫ್ಘಾನಿಸ್ತಾನ, ಪಂಜಾಬ್, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಿಂದಲೂ ವ್ಯಾಪಾರಿಗಳನ್ನು ಆಕರ್ಷಿಸುತ್ತಿತ್ತು. 40 ಸಾವಿರ ರೂಪಾಯಿಯಿಂದ ಹಿಡಿದು ನಾಲ್ಕು ಲಕ್ಷ ರೂಪಾಯಿವರೆಗೂ ಇಲ್ಲಿ 50ಕ್ಕೂ ಹೆಚ್ಚು ಕುದುರೆ ಮಾರಾಟವಾಗುತ್ತಿತ್ತು.

ಪ್ರತಿ ವರ್ಷ 10-12 ತಳಿಯ ಕುದುರೆಗಳು ಆಗಮಿಸುತ್ತಿದ್ದವು ಎಂದು ಸ್ಥಳೀಯ ಇತಿಹಾಸ ತಜ್ಞ ರೂಪೇಶ್ ಸಿಂಗ್ ಹೇಳುತ್ತಾರೆ. ವೇಗಕ್ಕೆ ಹೆಸರಾದ ಮರ್ವಾಡಿ, ಸಿಂಧಿ, ಖಾತಿವಾಡಿ, ಸ್ಪಿತಿ ಮತ್ತು ಮಣಿಪುರಿಯಂಥ ಅಮೂಲ್ಯ ತಳಿಗಳು ಪ್ರಮುಖ ಆಕರ್ಷಣೆಗಳಾಗಿದ್ದವು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News