ಭಾರತಕ್ಕೆ ಒಬ್ಬನೇ ನಾಯಕ ಇರಬೇಕು ಎಂಬ ಬಿಜೆಪಿ ಚಿಂತನೆ ಅವಮಾನಕರ: ರಾಹುಲ್ ಗಾಂಧಿ

Update: 2024-04-15 15:05 GMT

 ರಾಹುಲ್ ಗಾಂಧಿ | PC : PTI 

ವಯನಾಡ್: ಕೇಂದ್ರದಲ್ಲಿರುವ ಆಡಳಿತಾರೂಢ ಬಿಜೆಪಿ ‘‘ದೇಶದಲ್ಲಿ ಒಬ್ಬನೇ ನಾಯಕ’’ ಚಿಂತನೆಯನ್ನು ಹೇರುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ.

ತನ್ನ ಚುನಾವಣಾ ಪ್ರಚಾರದ ಭಾಗವಾಗಿ ಬೃಹತ್ ರೋಡ್ ಶೋ ಬಳಿಕ ವಯನಾಡ್ನಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರರನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು.

ಭಾರತ ಹೂಗಳ ಗುಚ್ಚದಂತೆ. ಪ್ರತಿಯೊಂದು ಹೂವಿಗೂ ಗೌರವ ನೀಡಬೇಕು. ಯಾಕೆಂದರೆ, ಅದು ಗುಚ್ಚಕ್ಕೆ ಸೌಂದರ್ಯವನ್ನು ನೀಡುತ್ತದೆ ಎಂದು ಅವರು ಹೇಳಿದರು. ‘‘ಭಾರತಕ್ಕೆ ಏಕೈಕ ನಾಯಕನಿರಬೇಕು ಎಂಬ ಚಿಂತನೆ ಪ್ರತಿಯೋರ್ವ ಯುವ ಭಾರತೀಯನಿಗೆ ಅವಮಾನ’’ ಎಂದರು.

ಭಾರತದಲ್ಲಿ ಹೆಚ್ಚು ನಾಯಕರು ಯಾಕೆ ಇರಬಾರದು? ಇದು ಕಾಂಗ್ರೆಸ್ ಹಾಗೂ ಬಿಜೆಪಿಯ ಚಿಂತನೆಯ ನಡುವೆ ಇರುವ ಭಿನ್ನತೆ ಎಂದು ರಾಹುಲ್ ಗಾಂಧಿ ಹೇಳಿದರು.

ದೇಶದಲ್ಲಿರುವ ಜನರನ್ನು ಆಲಿಸಲು ಹಾಗೂ ಪ್ರೀತಿಸಲು, ಅವರ ನಂಬಿಕೆ, ಭಾಷೆ, ಧರ್ಮ, ಸಂಸ್ಕೃತಿಗೆ ಗೌರವ ನೀಡಲು ಕಾಂಗ್ರೆಸ್ ಬಯಸುತ್ತದೆ. ಆದರೆ, ಬಿಜೆಪಿ ಮೇಲಿನಿಂದ ಕೆಲವನ್ನು ಹೇರಲು ಬಯಸುತ್ತಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News