ಕೇಂದ್ರ ಬಜೆಟ್| 500 ಟಾಪ್‌ ಕಂಪೆನಿಗಳಲ್ಲಿ ಒಂದು ಕೋಟಿ ಯುವಕರಿಗೆ ಇಂಟರ್ನ್‌ಶಿಪ್​ಗೆ ಅವಕಾಶ

Update: 2024-07-23 07:09 GMT

Photo credit: PTI

ಹೊಸದಿಲ್ಲಿ: ಕೇಂದ್ರ ಸರಕಾರವು ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಯುವಕರಿಗೆ 12 ತಿಂಗಳ ಕಾಲ ದೇಶದ ಟಾಪ್ 500 ‌ಕಂಪೆನಿಗಳಲ್ಲಿ ರೂ. 5000 ಮಾಸಿಕ ಸಹಾಯಧನ ಸಹಿತ ಇಂಟರ್ನ್‌ಶಿಪ್ ಒದಗಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ. ಇದರೊಂದಿಗೆ ಒಂದು ಬಾರಿಯ ರೂ. 6,000 ನೆರವನ್ನೂ ಒದಗಿಸಲಾಗುತ್ತದೆ.

ಯುವಕರ ತರಬೇತಿಗೆ ಆಗುವ ವೆಚ್ಚವನ್ನು ಉದ್ಯಮಗಳೇ ಭರಿಸುವ ನಿರೀಕ್ಷೆ ಇದ್ದು, ಇಂಟರ್ನ್‌ಶಿಪ್ ಉದ್ಯೋಗ ಭತ್ಯೆಯ ವೆಚ್ಚದ ಪೈಕಿ ಶೇ. 10ರಷ್ಟು ವೆಚ್ಚವನ್ನು ಸಿಎಸ್ಆರ್ ನಿಧಿಯಿಂದ ಸಂಬಂಧಿತ ಸಂಸ್ಥೆಗಳು ಭರಿಸಲಿವೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News