13 ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ | ಶಾಂತಿಯುತವಾಗಿ ನಡೆದ ಮತದಾನ

Update: 2024-07-10 16:47 GMT

PC : PTI

ಹೊಸದಿಲ್ಲಿ : ದೇಶದ ವಿವಿಧ ರಾಜ್ಯಗಳ 13 ವಿಧಾನ ಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಬುಧವಾರ ನಡೆಯಿತು.

ಉತ್ತರಾಖಂಡ ಹಾಗೂ ಪಶ್ಚಿಮಬಂಗಾಳದಲ್ಲಿ ಹಿಂಸಾಚಾರದ ಕೆಲವು ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿ ನಡೆದಿದೆ.

ಇಂದು ಮತದಾನ ನಡೆದ ವಿಧಾನ ಸಭಾ ಕ್ಷೇತ್ರಗಳೆಂದರೆ ಪಶ್ಚಿಮಬಂಗಾಳದ ರಾಯ್‌ಗಂಜ್, ರಾನಾಘಾಟ್ ದಕ್ಷಿಣ, ಬಾಗ್ಡಾ ಹಾಗೂ ಮಾಣಿಕ್ತಲಾ; ಉತ್ತರಾಖಂಡದ ಬದರಿನಾಥ್ ಹಾಗೂ ಮಾಂಗ್ಲೌರ್; ಪಂಜಾಬ್‌ನ ಜಲಾಂಧರ್ ಪಶ್ಚಿಮ; ಹಿಮಾಚಲಪ್ರದೇಶದ ದೆಹ್ರಾ, ಹಮೀರ್‌ಪುರ ಹಾಗೂ ನಲಗಢ; ಬಿಹಾರದ ರೂಪೌಲಿ; ತಮಿಳುನಾಡಿನ ವಿಕ್ರವಂಡಿ; ಮಧ್ಯಪ್ರದೇಶದ ಅಮರ್ವಾರ.

ಈ ಚುನಾವಣೆ ಹಿಮಾಚಲಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಪತ್ನಿ ಕಮಲೇಶ್ ಠಾಕೂರ್ ಸೇರಿದಂತೆ ಹಲವು ಹಿರಿಯ ಹಾಗೂ ಕಿರಿಯ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ.

ಮತ ಎಣಿಕೆ ಜುಲೈ 13ರಂದು ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News