CAA | ಮುಂದಿನ ತಿಂಗಳಿನಿಂದ ನೂತನ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಸಾಧ್ಯತೆ ; ವರದಿ
Update: 2024-02-27 14:11 GMT
ಹೊಸದಿಲ್ಲಿ: ನೆರೆಯ ದೇಶಗಳಿಂದ ಭಾರತಕ್ಕೆ ಬಂದು ನೆಲೆಸಿರುವ ಅಲ್ಲಿನ ಅಲ್ಪಸಂಖ್ಯಾತ ಸಮುದಾಯಗಳಿಗೆ ಪೌರತ್ವ ಒದಗಿಸುವ ನೂತನ ಪೌರತ್ವ ಕಾಯ್ದೆ ನಿಯಮಗಳು ಮುಂದಿನ ತಿಂಗಳಿನಿಂದ ಜಾರಿಯಾಗುವ ಸಾಧ್ಯತೆ ಇದೆ ಎಂದು ndtv ವರದಿ ಮಾಡಿದೆ.
ಭಾರತೀಯ ಪೌರತ್ವ ಪಡೆಯಲು ಧರ್ಮವನ್ನು ಪರೀಕ್ಷೆಗೊಳಪಡಿಸುವ ಪೌರತ್ವ ತಿದ್ದುಪಡಿ ಕಾಯ್ದೆಯು 2019ರಲ್ಲಿ ಅಂಗೀಕಾರಗೊಂಡಿತ್ತಾದರೂ, ಆ ಕಾಯ್ದೆಯ ವಿರುದ್ಧ ದೇಶಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿದ್ದವು.
ನೆರೆಯ ದೇಶಗಳಲ್ಲಿನ ದೌರ್ಜನ್ಯದ ಕಾರಣಕ್ಕೆ ಭಾರತಕ್ಕೆ ಆಗಮಿಸಿರುವ ಮುಸ್ಲಿಮೇತರ ನಿರಾಶ್ರಿತರಿಗೆ ಈ ನೂತನ ಕಾಯ್ದೆಯಿಂದ ನೆರವು ದೊರೆಯಲಿದೆ ಎಂದು ಕೇಂದ್ರ ಸರಕಾರ ಅಭಿಪ್ರಾಯ ಪಟ್ಟಿತ್ತು.
ಈ ಕಾಯ್ದೆಯು ಮುಸ್ಲಿಮರ ವಿರುದ್ಧ ತಾರತಮ್ಯವೆಸಗುತ್ತದೆ ಹಾಗೂ ಸಂವಿಧಾನದ ಜಾತ್ಯತೀತ ಸ್ಫೂರ್ತಿಗೆ ಧಕ್ಜೆ ತರುತ್ತದೆ ಎಂದು ಟೀಕಾಕಾರರು ಆರೋಪಿಸಿದ್ದಾರೆ.