ಸಿಎಎ, ಒಂದು ರಾಷ್ಟ್ರ-ಒಂದು ಚುನಾವಣೆ, ನೀಟ್ ವಿರುದ್ಧ ಕ್ರಮ: ಡಿಎಂಕೆ ಪ್ರಣಾಳಿಕೆಯಲ್ಲಿ ಭರವಸೆ
Update: 2024-03-20 08:57 GMT
ಚೆನ್ನೈ: 'ಒಂದು ರಾಷ್ಟ್ರ, ಒಂದು ಚುನಾವಣೆ' ರದ್ದುಪಡಿಸುವ, ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ರದ್ದುಪಡಿಸುವ ಭರವಸೆಗಳು ಮತ್ತು ಶ್ರೀಲಂಕಾದ ತಮಿಳರಿಗೆ ಭಾರತೀಯ ಪೌರತ್ವವನ್ನು ನೀಡುವ ಭರವಸೆಗಳನ್ನು ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ನೀಡಿದೆ.
NEET ಅಥವಾ ರಾಷ್ಟ್ರೀಯ ಪ್ರವೇಶ ಅರ್ಹತಾ ಪರೀಕ್ಷೆಯನ್ನು ರದ್ದುಗೊಳಿಸುವುದಾಗಿಯೂ ಡಿಎಂಕೆ ಪ್ರತಿಜ್ಞೆ ಮಾಡಿದೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ತೂತುಕುಡಿ ಸಂಸದೆ ಕನಿಮೊಳಿ ಸೇರಿದಂತೆ ಹಿರಿಯ ನಾಯಕರಿಂದ ಬಿಡುಗಡೆಯಾದ ಡಿಎಂಕೆ ಪ್ರಣಾಳಿಕೆಯಲ್ಲಿ, ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ಬಿಜೆಪಿಯ "ಜನವಿರೋಧಿ ಕಾನೂನು" ಗಳನ್ನು ಪರಿಶೀಲಿಸುವುದಾಗಿ ಹೇಳಿದ್ದು, ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯನ್ನು ತೀವ್ರವಾಗಿ ಟೀಕಿಸಿದೆ.