ಅಯೋಧ್ಯೆಯ ರಾಮಮಂದಿರಕ್ಕೆ ಮುಸ್ಲಿಮ್ ಶಿಲ್ಪಿಗಳಿಂದ ಶ್ರೀರಾಮನ ಮೂರ್ತಿ ಕೆತ್ತನೆ

Update: 2023-12-14 14:07 GMT

Photo: indiatoday.in

ಕೋಲ್ಕತಾ : ಅಯೋಧ್ಯೆಯ ರಾಮಮಂದಿರಕ್ಕಾಗಿ ಇಬ್ಬರು ಮುಸ್ಲಿಂ ಕಲಾವಿದರು ರಾಮನ ಮೂರ್ತಿಗಳನ್ನು ತಯಾರಿಸುತ್ತಿದ್ದು ಕಲಾವಿದರಿಗೆ ಧರ್ಮವಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಶೀಘ್ರದಲ್ಲೇ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಉದ್ಘಾಟನೆಯಾಗಲಿರುವ ಅಯೋಧ್ಯೆ ರಾಮಮಂದಿರಕ್ಕಾಗಿ ಇಬ್ಬರು ಮುಸ್ಲಿಂ ಕಲಾವಿದರು ಶ್ರೀರಾಮನ ವಿಗ್ರಹಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ. ಆ ಕಲಾವಿದರಿಬ್ಬರೂ ತಂದೆ-ಮಗನಾಗಿದ್ದು ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಗೆ ಸೇರಿದವರಾಗಿದ್ದಾರೆ. ತಂದೆ ಮುಹಮ್ಮದ್ ಜಮಾಲುದ್ದೀನ್ ಮತ್ತು ಅವರ ಮಗ ಬಿಟ್ಟು ದೇವಸ್ಥಾನದ ಸಂಕಿರಣದಲ್ಲಿ ಅಲಂಕರಿಸಲು ಈ ಭವ್ಯವಾದ ವಿಗ್ರಹಗಳನ್ನು ತಯಾರಿಸುವಲ್ಲಿ ನಿರತರಾಗಿದ್ದಾರೆ.

ರಾಮನ ವಿಗ್ರಹಗಳನ್ನು ತಯಾರಿಸಲು ಆನ್ ಲೈನ್ ಮೂಲಕ ಅವರಿಗೆ ಬೇಡಿಕೆ ಸಲ್ಲಿಸಲಾಗಿದೆ. “ಈ ವಿಗ್ರಹಗಳು ಸಂಪೂರ್ಣವಾಗಿ ಫೈಬರ್ ನಿಂದ ಮಾಡಲ್ಪಟ್ಟಿದೆ. ಪ್ರತಿಯೊಂದು ವಿಗ್ರಹಕ್ಕೂ 2.8 ಲಕ್ಷ ರೂ. ವೆಚ್ಚವಾಗಲಿದೆ. ಜೇಡಿಮಣ್ಣಿಗೆ ಹೋಲಿಸಿದರೆ ಫೈಬರ್ ಬೆಲೆ ಹೆಚ್ಚಿದ್ದರೂ, ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಅವುಗಳನ್ನು ತೆರೆದ ಸ್ಥಳಗಳಲ್ಲಿ ಅಳವಡಿಸಬಹುದು”, ಎಂದು ಜಮಾಲುದ್ದೀನ್ ಹೇಳುತ್ತಾರೆ.

ಜಮಾಲುದ್ದೀನ್ ಮಾತನಾಡಿ, “ಧರ್ಮವು ವೈಯಕ್ತಿಕ ವಿಚಾರ. ವಿವಿಧ ಧರ್ಮಗಳಿರುವ ನಮ್ಮ ದೇಶದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ರಾಮನ ಪ್ರತಿಮೆಯನ್ನು ಮಾಡಲು ಸಂತೋಷವಾಗುತ್ತಿದೆ. ಕಲೆಗೆ ಧರ್ಮವಿಲ್ಲ ಎಂಬುದು ಕಲಾವಿದನಾಗಿ ನನ್ನ ಸಂದೇಶವಾಗಿದೆ” ಎಂದು ಹೇಳಿದರು.

ಬೇಡಿಕೆಯಿರುವ ಕಲಾವಿದ ಜಮಾಲುದ್ದೀನ್ ಹಿಂದೆಯೂ ದುರ್ಗಾ ದೇವಿಯ ವಿಗ್ರಹಗಳನ್ನು ತಯಾರಿಸಿದ್ದಾರೆ. ಅವರ ಕುಟುಂಬವು ವರ್ಷಗಳಿಂದ ಹಿಂದೂ ದೇವತೆಗಳ ಫೈಬರ್ ವಿಗ್ರಹಗಳನ್ನು ತಯಾರಿಸುತ್ತಿದೆ. ಅವರು ತಯಾರಿಸುತ್ತಿರುವ ಶ್ರೀರಾಮನ ವಿಗ್ರಹಗಳನ್ನು ಅಯೋಧ್ಯೆಗೆ ಸ್ಥಳಾಂತರಿಸಲು ಸುಮಾರು 45 ದಿನಗಳನ್ನು ಬೇಕಾಗಬಹುದು ಎಂದು 10tv ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News