ದಿಲ್ಲಿಯಲ್ಲಿ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಕೇಂದ್ರ, ಉಲ್ಫಾ
Update: 2023-12-29 12:27 GMT
ಹೊಸದಿಲ್ಲಿ : ಕೇಂದ್ರ, ಅಸ್ಸಾಂ ಸರ್ಕಾರ ಮತ್ತು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ಉಲ್ಫಾ) ನಡುವಿನ ತ್ರಿಪಕ್ಷೀಯ ಶಾಂತಿ ಒಪ್ಪಂದಕ್ಕೆ ದಿಲ್ಲಿಯಲ್ಲಿ ಸಹಿ ಹಾಕಲಾಗಿದೆ. ಈಶಾನ್ಯ ಪ್ರದೇಶದ ಅತಿದೊಡ್ಡ ಬಂಡಾಯ ಗುಂಪಾಗಿದ್ದ
ಉಲ್ಫಾ ರಾಷ್ಟ್ರೀಯ ಭದ್ರತೆಗೆ ಸವಾಲಾಗಿತ್ತು.
ಶಾಂತಿ ಒಪ್ಪಂದವು ಅಕ್ರಮ ವಲಸೆ, ಸ್ಥಳೀಯ ಸಮುದಾಯಗಳಿಗೆ ಭೂಮಿಯ ಹಕ್ಕುಗಳು ಮತ್ತು ಅಸ್ಸಾಂನ ಅಭಿವೃದ್ಧಿಗೆ ಹಣಕಾಸಿನ ಪ್ಯಾಕೇಜ್‌ನಂತಹ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.
ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಅವರು, “ಉಲ್ಫಾದ ಎಲ್ಲಾ ಬೇಡಿಕೆಗಳನ್ನು ಸಮಯಕ್ಕೆ ಅನುಗುಣವಾಗಿ ಪೂರೈಸಲಾಗುವುದು ಎಂದು ಕೇಂದ್ರವು ಖಚಿತಪಡಿಸುತ್ತದೆ” ಎಂದರು.